ಎಲ್ಲಾ ವರ್ಗದ ಜನರೊಂದಿಗೆ ರಾಜ್ಯ ಮುನ್ನಡೆಸುವೆ: ಸಿಎಂ ಡಿ ಕೆ ಶಿವಕುಮಾರ್

ರಾಜ್ಯದ ಜನತೆಗೆ ಸ್ವಾತಂತ್ರ್ಯ ದಿನಾಚರಣೆ ಶುಭ ಕೋರಿದ ಸಿಎಂ
ಬೆಂಗಳೂರು, ಆ. 15: "ರಾಜ್ಯದ ಮುಖ್ಯಮಂತ್ರಿ, ಜನರ ಸೇವಕನಾಗಿ ರಾಷ್ಟ್ರಧ್ವಜ ಹಾರಿಸುವ ಅವಕಾಶ ಸಿಕ್ಕಿದೆ. ಎಲ್ಲಾ ವರ್ಗದ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನೆಮ್ಮದಿ, ಶಾಂತಿ, ಸೌಹಾರ್ದತೆ ಕಾಪಾಡಲು ಪ್ರಯತ್ನಿಸುವೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
80 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸದಾಶಿವನಗರ ನಿವಾಸದಲ್ಲಿ ಶನಿವಾರ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
"ನಾಡಿನ ಹಾಗೂ ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನದ ಹೃದಯಪೂರ್ವಕ ಶುಭಾಶಯಗಳು. ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ತ್ಯಾಗ ಬಲಿದಾನ ಮಾಡಿದ ನಾಯಕರನ್ನು ಸ್ಮರಿಸಿ, ಪ್ರಜಾಪ್ರಭುತ್ವ ವ್ಯವಸ್ಥೆ, ಸ್ವಾತಂತ್ರ್ಯದಿಂದ ನಾವು ಬದುಕುತ್ತಿದ್ದೇವೆ. ರಾಜ್ಯದ ಜನರ ಪರವಾಗಿ ಧ್ವಜಾರೋಹಣ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಎಲ್ಲಾ ವರ್ಗದ ಜನ ಈ ಸಂಭ್ರಮಾಚರಣೆ ಮಾಡಬೇಕು" ಎಂದು ಹೇಳಿದರು.
Next Story




