ಗಲಭೆ ಸಂತ್ರಸ್ತರಿಗೆ ನೀಡುವ ಪರಿಹಾರ ಮೊತ್ತ ಹೆಚ್ಚಳ

ಬೆಂಗಳೂರು, ಸೆ. 30: ಗುಂಪು ಹತ್ಯೆ, ಗಲಭೆ ಸಂತ್ರಸ್ತರಿಗೆ ಮತ್ತವರನ್ನು ಅವಲಂಬಿಸಿರುವ ಕುಟುಂಬದ ಸದಸ್ಯರಿಗೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಶನಿವಾರ ಈ ಸಂಬಂಧ ರಾಜ್ಯಪತ್ರ ಪ್ರಕಟಿಸಿದ್ದು, ‘ಗುಂಪು ಹತ್ಯೆಗೆ ಒಳಗಾಗುವ ಸಂತ್ರಸ್ತರ ಕುಟುಂಬಕ್ಕೆ 5 ಲಕ್ಷ ರೂ.ನಿಂದ 10 ಲಕ್ಷ ರೂ., ಸಂತ್ರಸ್ತರು ಶೇ.80ರಷ್ಟು ಅಂಗವಿಕಲತೆಗೆ ಒಳಗಾಗಿದ್ದರೆ 2 ಲಕ್ಷ ರೂ.ನಿಂದ 5 ಲಕ್ಷ ರೂ., ಶೇ.40ಕ್ಕೂ ಹೆಚ್ಚು ಅಂಗವಿಕಲತೆಗೆ ಒಳಗಾಗಿದ್ದರೆ 2 ಲಕ್ಷ ರೂ.ನಿಂದ 4 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ.
ಅದೇ ರೀತಿಯಲ್ಲಿ ಶೇ.20ರಷ್ಟು ಅಂಗವಿಕಲತೆ ಆಗಿದ್ದರೆ 1 ಲಕ್ಷ ರೂ.ನಿಂದ 3 ಲಕ್ಷ ರೂ., ಶೇ.20ಕ್ಕಿಂತ ಕಡಿಮೆ ಇದ್ದರೆ 1ಲಕ್ಷ ರೂ.ನಿಂದ 2 ಲಕ್ಷ ರೂ.ವರೆಗೆ ಪರಿಹಾರ ನಿಗದಿ ಮಾಡಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಂತ್ರಸ್ತರ ಪರಿಹಾರ ಯೋಜನೆ-2011ಕ್ಕೆ ತಿದ್ದುಪಡಿ ತರಲಾಗಿದೆ ಎಂದು ಉಲ್ಲೇಖಿಸಲಾಗಿದೆ.
Next Story





