ಇಂದಿರಾ ಕ್ಯಾಂಟೀನ್ನಲ್ಲಿ ಮೊಟ್ಟೆ ವಿತರಣೆಯ ಬಗ್ಗೆ ಚಿಂತನೆ : ಸಚಿವ ರಹೀಂ ಖಾನ್

ರಹೀಂ ಖಾನ್
ದಾವಣಗೆರೆ : ಪ್ರಸ್ತುತ ಇರುವ ಇಂದಿರಾ ಕ್ಯಾಂಟೀನ್ಗಳಲ್ಲಿ ಮಾಂಸಾಹಾರ ನೀಡಿ ಎಂಬ ಬೇಡಿಕೆ ಇದ್ದು, ಸದ್ಯಕ್ಕೆ ಮೊಟ್ಟೆ ಕೊಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದರು.
ನಗರದಲ್ಲಿ ಇಂದಿರಾ ಕ್ಯಾಂಟೀನ್ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಟ್ಟೆಯಿಂದ ಪೋಷಕಾಂಶ ಸಿಗುತ್ತದೆ. ಹಾಗಾಗಿ, ಸದ್ಯಕ್ಕೆ ಮೊಟ್ಟೆ ನೀಡುವ ಕುರಿತು ಚಿಂತನೆ ನಡೆದಿದೆ. ಇಂದಿರಾ ಕ್ಯಾಂಟೀನ್ ಸಿಎಂ ಸಿದ್ದರಾಮಯ್ಯ ಅವರ ಕನಸು. ನಮ್ಮ ಸರಕಾರ ಬಂದ ಮೇಲೆ ಸಿಎಂ, ಡಿಸಿಎಂ ಬಡವರ ಸಲುವಾಗಿ ಹಲವು ಕೆಲಸ ಮಾಡಿದ್ದಾರೆ. ನಮ್ಮ ಅವಧಿಯಲ್ಲಿ ಕ್ಯಾಂಟಿನ್ ಸರಿಯಾಗಿ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಂದ್ ಆಯ್ತು. ಈಗ ಮತ್ತೆ ಶುರು ಮಾಡಿ ಬಡವರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದೆ. ಜತೆಗೆ, 186 ಹೊಸ ಇಂದಿರಾ ಕ್ಯಾಂಟಿನ್ ಮಾಡಲಾಗಿದೆ ಎಂದರು.
ಕೇಂದ್ರ ಸರಕಾರ ಗುಟ್ಕಾ, ಸಿಗರೇಟ್, ಮದ್ಯ ನಿಷೇಧದ ಬಿಲ್ ತರಬೇಕು. ಅದನ್ನು ಬಿಟ್ಟು ವಕ್ಫ್ ಬಿಲ್ ತರುತ್ತಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ, ಡೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಮುಖಂಡರಾದ ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ್ ಇತರರು ಉಪಸ್ಥಿತರಿದ್ದರು.





