ಬಿಜೆಪಿ ನನ್ನ ರಾಜೀನಾಮೆಗೆ ಒತ್ತಾಯಿಸುವ ಬದಲು ಕೆಲವು ಪ್ರಶ್ನೆಗಳಿಗೆ ಉತ್ತರಿಸಲಿ: ಪ್ರಿಯಾಂಕ್ ಖರ್ಗೆ
ಬಸವರಾಜ ಕನ್ನಾಳೆ, ಶಿವಶಂಕರಪ್ಪ ಸಾಹುಕಾರ್ ವಿಚಾರದಲ್ಲಿ ಬಿಜೆಪಿ ಮೌನ ಏಕೆ?

ನನ್ನ ರಾಜೀನಾಮೆಗೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರಲ್ಲಿ ನಾನೇಕೆ ರಾಜೀನಾಮೆ ಕೊಡಬೇಕು ಎಂದು ಕೇಳಿದರೆ ಅವರಲ್ಲಿ ಸ್ಪಷ್ಟ ಉತ್ತರವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಹಾಕಿರುವ ಅವರು, ಗಟ್ಟಿಯಾಗಿ ಕೂಗಾಡಿದ ಮಾತ್ರಕ್ಕೆ ಸತ್ಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ಆದ್ದರಿಂದ, ನನ್ನ ರಾಜೀನಾಮೆಯನ್ನು ಒತ್ತಾಯಿಸುವ ಬದಲು, ಬಿಜೆಪಿ ಈ ಕೆಳಗಿನ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸಲಿ ಎಂದಿದ್ದಾರೆ.
KPSC ಹಗರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಬಸವರಾಜ ಕನ್ನಾಳೆ ಅವರ ವಿಷಯದಲ್ಲಿ ಬಿಜೆಪಿ ನಾಯಕರು ಏಕೆ ಮೌನವಾಗಿದ್ದಾರೆ? ಅವರು ಬಿಜೆಪಿಯ ಅಧಿಕೃತ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಗಳಲ್ಲಿ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಅವರ "ಅಪ್ಪಾಜಿ"ಯ ಆಶೀರ್ವಾದ ಪಡೆಯುತ್ತಿರುವುದು ಕಂಡುಬರುತ್ತದೆ. ಬಿಜೆಪಿ ನಾಯಕರು ಅವರ ಹುಟ್ಟುಹಬ್ಬದ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಅವರ ಉದ್ಯಮಗಳಿಗೆ ಚಾಲನೆ ನೀಡುವುದನ್ನು ಹಾಗೂ ಅವರಿಗೆ ಅತ್ಯಂತ ಪ್ರೀತಿಯಿಂದ ತಿನಿಸುವುದನ್ನು ಕಾಣಬಹುದು.
ಹೀಗಿರುವಾಗ ಬಿಜೆಪಿಗರು ನನ್ನ ರಾಜೀನಾಮೆಗೆ ಮಾತ್ರ ಒತ್ತಾಯಿಸುತ್ತಾರೆ. ದೇಶದಿಂದ ಪರಾರಿಯಾಗಲು ಬಸವರಾಜ ಕನ್ನಾಳೆ ನಡೆಸಿದರೆನ್ನಲಾದ ಪ್ರಯತ್ನದ ಬಗ್ಗೆ ಬಿಜೆಪಿ ನಾಯಕರು ಏಕೆ ಮೌನವಾಗಿದ್ದಾರೆ?
ಶಿವಶಂಕರಪ್ಪ ಸಾಹುಕಾರ್ ವಿಷಯ ಬಂದಾಗ ಅವರ ಬಾಯಿ ಏಕೆ ಮುಚ್ಚಿಕೊಂಡಿದೆ? ಮತ್ತು ಇನ್ನೂ ದೊಡ್ಡ ಪ್ರಶ್ನೆಯೊಂದಿದೆ: ಜನರನ್ನು KPSC ಸದಸ್ಯರು ಮತ್ತು ಅಧ್ಯಕ್ಷರನ್ನಾಗಿ ಮಾಡಲು ಬಿಜೆಪಿ ನಾಯಕರು ಎಷ್ಟು ಹಣ ಪಡೆದಿದ್ದಾರೆ? ವಾಸ್ತವವಾಗಿ ಎಷ್ಟು ಬಿಜೆಪಿ ನಾಯಕರು KPSC ಹಗರಣದ ಬಗ್ಗೆ ಮಾತನಾಡಿದ್ದಾರೆ ಅಥವಾ ಹೊಣೆಗಾರಿಕೆಯನ್ನು ಒತ್ತಾಯಿಸಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
The @BJP4Karnataka leadership is desperately demanding my resignation.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) September 7, 2026
Ask them why and even they don’t have an answer.
Being loud, won’t drown the truth.
So instead of demanding my resignation, let the BJP answer a few simple questions:
Why are BJP leaders silent on… pic.twitter.com/ToJ0loMWof






