ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಅಧಿಕಾರಾವಧಿ ಮತ್ತೆ ವಿಸ್ತರಣೆ
ಬೆಂಗಳೂರು, ಜು.17: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹಾಲಿ ನಿರ್ದೇಶಕರಾಗಿರುವ ಡಾ.ಸಿ.ಎನ್.ಮಂಜುನಾಥ್ ಅವರ ಸೇವಾವಧಿ ಮುಮದಿನ 6 ತಿಂಗಳು ಮುಂದುವರೆಸುವಂತೆ ರಾಜ್ಯ ಸರಕಾರ ಆದೇಶಿದೆ ಎಂದು ವರದಿಯಾಗಿದೆ.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಡಳಿತ ಮಂಡಳಿ ಸಭೆ ಮತ್ತು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇನ್ನೂ 6 ತಿಂಗಳು ಡಾ.ಸಿ.ಎನ್.ಮಂಜುನಾಥ್ ಅವರ ಸೇವಾವಧಿ ಮುಂದುವರೆಸುವಂತೆ ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಜಯದೇವ ಸಂಸ್ಥೆಯ ಹಾಲಿ ನಿರ್ದೇಶಕರಾಗಿರುವ ಡಾ.ಸಿ.ಎನ್.ಮಂಜುನಾಥ್ ಅವರ ಅಧಿಕಾರಾವಧಿ ಜು.19ಕ್ಕೆ ಮುಕ್ತಾಯಗೊಳ್ಳುವುದರಿಂದ ಸಭೆಯಲ್ಲಿ ಈ ವಿಚಾರ ಕೂಡ ಚರ್ಚೆ ನಡೆಯಿತು. ಅಲ್ಲದೆ, ಡಾ.ಮಂಜುನಾಥ್ ಅವರು ಕಳೆದ 16 ವರ್ಷಗಳಿಂದ ನಿರ್ದೇಶಕರಾಗಿದ್ದಾರೆ. ಅವರು ನಿವೃತ್ತರಾದ ಬಳಿಕವೂ ಹಲವು ವರ್ಷಗಳಿಂದ ಅವನರನ್ನೇ ನಿರ್ದೇಶಕ ಹುದ್ದೆಯಲ್ಲಿ ವಿವಿಧ ಸರ್ಕಾರಗಳು ಮುಂದುವರೆಸುತ್ತಾ ಬಂದಿವೆ.
Next Story