ಜಾರ್ಜಿಯ ರಾಜ್ಯದ ಪೀಚ್ ಟ್ರೀ ಸಿಟಿ ಕನ್ನಡಿಗರಿಂದ ರಾಜ್ಯೋತ್ಸವ ಸಂಭ್ರಮಾಚರಣೆ

ಶಾರ್ಪ್‌ಬರ್ಗ್: ಜಾರ್ಜಿಯ ರಾಜ್ಯದ ಪೀಚ್ ಟ್ರೀ ಸಿಟಿ ಕನ್ನಡಿಗರು ನ.8 ರಂದು ಸಂಭ್ರಮದಿಂದ ಕರ್ನಾಟಕ ರಾಜ್ಸೋತ್ಸವ ಆಚರಿಸಿದರು.
ಪೀಚ್ ಟ್ರೀ ಸಿಟಿ ಕನ್ನಡ ಬಳಗದ ಮಕ್ಕಳು ಹಾಗೂ ಪೋಷಕರು ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.
ಮಕ್ಕಳಿಂದ ನೃತ್ಯ, ಹಾಡುಗಳು ಹಾಗೂ ಹಾಸ್ಯ ನಾಟಕಗಳ ಪ್ರದರ್ಶನ ನಡೆಯಿತು.
RCB ತಂಡದ ವಿಜಯವನ್ನು ಸಂಭ್ರಮಿಸುವ ಅದ್ಭುತ ನೃತ್ಯ ನಾಟಕವು ಸಭಿಕರನ್ನು ಖುಷಿಯ ಕಡಲಿನಲ್ಲಿ ತೇಲಿಸಿತು. ಹಿರಿಯರ ʼರಾಮ A I ಯಾಣʼ ನಾಟಕವು ಎಲ್ಲರ ಪ್ರಶಂಸೆ ಪಡೆಯಿತು. ಬಸವ ಹಾಗೂ ಕುವೆಂಪುರವರ ವಿಶ್ವಮಾನವ ಸಂದೇಶವಿರುವ “ಕುಲದಲ್ಲಿ ಕೀಳ್ಯಾವುದೊ” ನೃತ್ಯ ಗಾಯನ ಅದ್ಭುತವಾಗಿ ಮೂಡಿಬಂದಿತು.
ಕನ್ನಡ ಶಾಲೆಯ ಶಿಕ್ಷಕರಾದ ರಹಮತ್ ದಲಾಯತ್, ವೇಣಿ, ಶೃತಿ ಅನಿಲ್, ರಾಧಾ ಕಾಮತ್, ವೇದ ಗುರು, ಶರಣು ನಡಹಳ್ಳಿ ಮಕ್ಕಳಿಗೆ ಶ್ರಮವಹಿಸಿ ಅಭ್ಯಾಸ ಮಾಡಿಸಿ ತಾವೂ ಸಹ ಭಾಗವಹಿಸಿದ್ದರು. ಕನ್ನಡ ನಾಡಿನಿಂದ ದೂರವಿದ್ದರೂ ಕನ್ನಡ ಭಾಷೆಯು ನಮ್ಮ ಹೃದಯದಲ್ಲಿ ಸದಾ ರಾರಾಜಿಸುತ್ತದೆಂಬುದಕ್ಕೆ ಪೀಚ್ ಟ್ರೀ ಸಿಟಿ ಕನ್ನಡಿಗರ ರಾಜ್ಯೋತ್ಸವ ಸಂಭ್ರಮವೇ ಸಾಕ್ಷಿಯಾಗಿತ್ತು.







