Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಪ್ರಕಾಶ್ ರಾಜ್, ರಹಮತ್, ರಾಜೇಂದ್ರ...

ಪ್ರಕಾಶ್ ರಾಜ್, ರಹಮತ್, ರಾಜೇಂದ್ರ ಚೆನ್ನಿ, ಝಕರಿಯ ಸಹಿತ 70 ಮಂದಿಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

ವಾರ್ತಾಭಾರತಿವಾರ್ತಾಭಾರತಿ30 Oct 2025 5:47 PM IST
share
ಪ್ರಕಾಶ್ ರಾಜ್, ರಹಮತ್, ರಾಜೇಂದ್ರ ಚೆನ್ನಿ, ಝಕರಿಯ ಸಹಿತ 70 ಮಂದಿಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ
ಇಲ್ಲಿದೆ ಪೂರ್ಣ ಪಟ್ಟಿ

ಬೆಂಗಳೂರು : 2025ನೆ ವಾರ್ಷಿಕ ಸಾಲಿನ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ್ದು, ಬಹುಭಾಷಾ ನಟ ಪ್ರಕಾಶ್ ರಾಜ್, ಲೇಖಕ ಡಾ.ರಹಮತ್ ತರೀಕೆರೆ, ಅನಿವಾಸಿ ಭಾರತೀಯ ಉದ್ಯಮಿ ಝಕರಿಯ ಜೋಕಟ್ಟೆ, ಹಿರಿಯ ಪತ್ರಕರ್ತರಾದ ಬಿ.ಎಂ.ಹನೀಫ್, ರಾಜೇಂದ್ರ ಚೆನ್ನಿ, ನಿವೃತ್ತ ಐಎಎಸ್ ಅಧಿಕಾರಿ ಎಚ್.ಸಿದ್ದಯ್ಯ ಸೇರಿದಂತೆ ವಿವಿಧ ಕ್ಷೇತ್ರಗಳ 70 ಮಂದಿ ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಾಹಿತ್ಯ ಕ್ಷೇತ್ರ-ಪ್ರೊ.ರಾಜೇಂದ್ರ ಚೆನ್ನಿ(ಶಿವಮೊಗ್ಗ), ತುಂಬಾಡಿ ರಾಮಯ್ಯ (ತುಮಕೂರು), ಪ್ರೊ.ಆರ್.ಸುನಂದಮ್ಮ(ಚಿಕ್ಕಬಳ್ಳಾಪುರ), ಡಾ.ಎಚ್.ಎಲ್ ಪುಷ್ಪ(ತುಮಕೂರು), ರಹಮತ್ ತರೀಕೆರೆ(ಚಿಕ್ಕಮಗಳೂರು), ಹ.ಮ.ಪೂಜಾರ (ವಿಜಯಪುರ).

ಜಾನಪದ ಕ್ಷೇತ್ರ-ಬಸಪ್ಪ ಭರಮಪ್ಪ ಚೌಡ್ಕಿ(ಕೊಪ್ಪಳ), ಬಿ.ಟಾಕಪ್ಪ ಕಣ್ಣೂರು (ಶಿವಮೊಗ್ಗ), ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ(ಬೆಳಗಾವಿ), ಹನುಮಂತಪ್ಪ ಮಾರಪ್ಪ ಚೀಳಂಗಿ(ಚಿತ್ರದುರ್ಗ), ಎಂ.ತೋಪಣ್ಣ(ಕೋಲಾರ), ಸೋಮಣ್ಣ ದುಂಡಪ್ಪ ಧನಗೊಂಡ(ವಿಜಯಪುರ), ಸಿಂಧು ಗುಜರನ್ (ದಕ್ಷಿಣ ಕನ್ನಡ), ಎಲ್.ಮಹದೇವಪ್ಪ ಉಡಿಗಾಲ(ಮೈಸೂರು).

ಸಂಗೀತ ಕ್ಷೇತ್ರ-ದೇವೆಂದ್ರ ಕುಮಾರ ಪತ್ತಾರ್(ಕೊಪ್ಪಳ), ಮಡಿವಾಳಯ್ಯ ಸಾಲಿ(ಬೀದರ್).

ನೃತ್ಯ ಕ್ಷೇತ್ರ-ಪ್ರೊ.ಕೆ.ರಾಮಮೂರ್ತಿ ರಾವ್(ಮೈಸೂರು).

ಚಲನಚಿತ್ರ, ಕಿರುತೆರೆ ಕ್ಷೇತ್ರ-ಪ್ರಕಾಶ್ ರಾಜ್(ದಕ್ಷಿಣ ಕನ್ನಡ), ವಿಜಯಲಕ್ಷ್ಮೀ ಸಿಂಗ್(ಕೊಡಗು).

ಆಡಳಿತ ಕ್ಷೇತ್ರ-ಎಚ್.ಸಿದ್ದಯ್ಯ ಬೆಂಗಳೂರು ದಕ್ಷಿಣ (ರಾಮನಗರ).

ವೈದ್ಯಕೀಯ ಕ್ಷೇತ್ರ-ಡಾ.ಆಲಮ್ಮ ಮಾರಣ್ಣ(ತುಮಕೂರು), ಡಾ.ಜಯರಂಗನಾಥ್(ಬೆಂಗಳೂರು ಗ್ರಾಮಾಂತರ).

ಸಮಾಜ ಸೇವೆ ಕ್ಷೇತ್ರ-ಸೂಲಗಿತ್ತಿ ಈರಮ್ಮ(ವಿಜಯನಗರ), ಫಕ್ಕೀರಿ(ಬೆಂಗಳೂರು ಗ್ರಾಮಾಂತರ), ಕೋರಿನ್ ಆಂಟೊನಿಯಟ್ ರಸ್ಕೀನಾ(ದಕ್ಷಿಣ ಕನ್ನಡ), ಡಾ.ಎನ್. ಸೀತಾರಾಮ ಶೆಟ್ಟಿ(ಉಡುಪಿ), ಕೋಣಂದೂರು ಲಿಂಗಪ್ಪ(ಶಿವಮೊಗ್ಗ).

ಸಂಕೀರ್ಣ- ಉಮೇಶ್ ಪಂಬದ (ದಕ್ಷಿಣಕನ್ನಡ), ಡಾ.ರವೀಂದ್ರ ಕೋರಿಶೆಟ್ಟರ್(ಧಾರವಾಡ), ಕೆ.ದಿನೇಶ್(ಬೆಂಗಳೂರು), ಶಾಂತರಾಜು(ತುಮಕೂರು), ಜಾಫರ್ ಮೊಹಿಯುದ್ದೀನ್ (ರಾಯಚೂರು), ಪೆನ್ನ ಓಬಳಯ್ಯ(ಬೆಂಗಳೂರು ಗ್ರಾಮಾಂತರ), ಶಾಂತಿ ಬಾಯಿ.ಕೆ.(ಬಳ್ಳಾರಿ), ಪುಂಡಲೀಕ ಶಾಸ್ತ್ರೀ(ಬುಡಬುಡಕೆ) (ಬೆಳಗಾವಿ).

ಹೊರನಾಡು-ಝಕರಿಯ ಜೋಕಟ್ಟೆ(ಬಜ್ಪೆ), ಪಿ.ವಿ.ಶೆಟ್ಟಿ(ಮುಂಬೈ)

ಪರಿಸರ ಕ್ಷೇತ್ರ-ರಾಮೇಗೌಡ(ಚಾಮರಾಜನಗರ), ಮಲ್ಲಿಕಾರ್ಜುನ ನಿಂಗಪ್ಪ(ಯಾದಗಿರಿ),

ಕೃಷಿ ಕ್ಷೇತ್ರ-ಡಾ.ಎಸ್.ವಿ.ಹಿತ್ತಲಮನಿ(ಹಾವೇರಿ), ಎಂ.ಸಿ. ರಂಗಸ್ವಾಮಿ(ಹಾಸನ).

ಮಾಧ್ಯಮ ಕ್ಷೇತ್ರ-ಕೆ.ಸುಬ್ರಮಣ್ಯ(ಬೆಂಗಳೂರು), ಅಂಶಿ ಪ್ರಸನ್ನ ಕುಮಾರ್(ಮೈಸೂರು), ಬಿ.ಎಂ.ಹನೀಫ್(ದಕ್ಷಿಣ ಕನ್ನಡ), ಎಂ.ಸಿದ್ದರಾಜು(ಮಂಡ್ಯ).

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ-ರಾಮಯ್ಯ (ಚಿಕ್ಕಬಳ್ಳಾಪುರ), ಏರ್ ಮಾರ್ಷಲ್ ಫೀಲಿಫ್ ರಾಜಕುಮಾರ್(ದಾವಣಗೆರೆ), ಡಾ.ಆರ್.ವಿ.ನಾಡಗೌಡ(ಗದಗ).

ಸಹಕಾರ ಕ್ಷೇತ್ರ-ಶೇಖರಗೌಡ ವಿ.ಮಾಲಿಪಾಟೀಲ್(ಕೊಪ್ಪಳ). ಯಕ್ಷಗಾನ ಕ್ಷೇತ್ರ-ಕೋಟ ಸುರೇಶ ಬಂಗೇರ(ಉಡುಪಿ), ಐರಬೈಲ್‍ಆನಂದ ಶೆಟ್ಟಿ (ಉಡುಪಿ), ಕೃಷ್ಣ ಪರಮೇಶ್ವರ ಹೆಗಡೆ(ಉತ್ತರ ಕನ್ನಡ).

ಬಯಲಾಟ ಕ್ಷೇತ್ರ-ಗುಂಡೂರಾಜ್(ಹಾಸನ).

ರಂಗಭೂಮಿ ಕ್ಷೇತ್ರ-ಎಚ್.ಎಂ.ಪರಮಶಿವಯ್ಯ ಬೆಂಗಳೂರು ದಕ್ಷಿಣ (ರಾಮನಗರ), ಮಾಸ್ತರ್ ಎಲ್.ಬಿ.ಶೇಕ್(ವಿಜಯಪುರ, ಬಂಗಾರಪ್ಪ ಖುದಾನ್‍ಪುರ(ಬೆಂಗಳೂರು), ಮೈಮ್ ರಮೇಶ್(ದಕ್ಷಿಣ ಕನ್ನಡ), ಡಿ.ರತ್ನಮ್ಮ ದೇಸಾಯಿ (ರಾಯಚೂರು).

ಶಿಕ್ಷಣ ಕ್ಷೇತ್ರ-ಡಾ.ಎಂ.ಆರ್.ಜಯರಾಂ(ಬೆಂಗಳೂರು), ಡಾ.ಎನ್.ಎಸ್.ರಾಮೇಗೌಡ (ಮೈಸೂರು), ಎಸ್.ಬಿ.ಹೊಸಮನಿ(ಕಲಬುರಗಿ) ರಾಜ್ ಶ್ರೀ ನಾಗರಾಜು(ಬೆಳಗಾವಿ).

ಕ್ರೀಡೆ ಕ್ಷೇತ್ರ-ಆಶೀಶ್ ಕುಮಾರ್ ಬಲ್ಲಾಳ್(ಬೆಂಗಳೂರು), ಎಂ.ಯೋಗೇಂದ್ರ (ಮೈಸೂರು), ಡಾ.ಬಬಿನಾ ಎನ್.ಎಂ.(ಕೊಡಗು).

ನ್ಯಾಯಾಂಗ ಕ್ಷೇತ್ರ-ನ್ಯಾ.ಪಿ.ಬಿ.ಭಜಂತ್ರಿ(ಬಾಗಲಕೋಟೆ).

ಶಿಲ್ಪಕಲೆ ಕ್ಷೇತ್ರ- ಬಸಣ್ಣ ಮೋನಪ್ಪ ಬಡಿಗೇರ(ಯಾದಗಿರಿ), ನಾಗಲಿಂಗಪ್ಪ ಜಿ.ಗಂಗೂರ (ಬಾಗಲಕೋಟೆ).

ಚಿತ್ರಕಲೆ ಕ್ಷೇತ್ರ-ಬಿ.ಮಾರುತಿ (ವಿಜಯನಗರ).

ಕರಕುಶಲ ಕ್ಷೇತ್ರ-ಎಲ್.ಹೇಮಾಶೇಖರ್(ಮೈಸೂರು).

ಈ ಕುರಿತು ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಗೊಳಿಸಿ ಗುರುವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ ಪ್ರಕ್ರಿಯೆ ಇಲ್ಲದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಕೆಲವರು ಸ್ವಯಂ ಮನವಿ ನೀಡಿದ್ದರು. ಆದರೆ, ಅವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದರು.

ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸು ಮಾಡಿದ್ದವರನ್ನು ಬಹುತೇಕ ಆಯ್ಕೆ ಮಾಡಲಾಗಿದ್ದು, ನಾಲ್ಕೈದು ಬಾರಿ ಸಭೆ ನಡೆಸಿದ ಸದಸ್ಯರು ಅರ್ಹರನ್ನು ಆಯ್ಕೆ ಮಾಡಲು ಸಹಕರಿಸಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ನುಡಿದರು.

5ಲಕ್ಷ ರೂ. ನಗದು: ಕಳೆದ ವರ್ಷದಂತೆ ಈ ಬಾರಿಯೂ ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ರೂಪಾಯಿ ನಗದು ಅನ್ನು ಒಳಗೊಂಡಿದೆ. ಜತೆಗೆ, ಮೊದಲೇ ನಿರ್ಧರಿಸಿದಂತೆ ಈ ಬಾರಿ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. ಈ ಬಾರಿ 12 ಮಹಿಳಾ ಸಾಧಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಸಚಿವರು ಹೇಳಿದರು.

ನ.1ರಂದು ಪ್ರಶಸ್ತಿ ಪ್ರದಾನ: ನ.1ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದು ಬೆಳಗ್ಗೆ 8.30ಗಂಟೆಗೆ ವಿಧಾನಸೌಧದ ಆವರಣದಲ್ಲಿರುವ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ ಎಂದು ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದರು.

ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅದರಂತೆ ಬಾಗಲಕೋಟೆ 2, ಬಳ್ಳಾರಿ 1, ಬೆಳಗಾವಿ 3, ಬೆಂಗಳೂರು ನಗರ 5, ಬೆಂಗಳೂರು ಗ್ರಾಮಾಂತರ 3, ಬೀದರ್ 1, ಚಿಕ್ಕಬಳ್ಳಾಪುರ 2, ದಕ್ಷಿಣ ಕನ್ನಡ 6, ಹಾಸನ 2, ಕೊಪ್ಪಳ 3, ಕೊಡಗು 2, ಮೈಸೂರು 6, ರಾಯಚೂರು 2, ಬೆಂಗಳೂರು ದಕ್ಷಿಣ(ರಾಮನಗರ) 2, ಶಿವಮೊಗ್ಗ 3, ತುಮಕೂರು 4, ಉಡುಪಿ 3, ವಿಜಯಪುರ 3, ಯಾದಗಿರಿ 2 ವಿಜಯನಗರ 2, ಹೊರದೇಶ 2 ಸೇರಿದಂತೆ ಚಾಮರಾನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೋಲಾರ, ಮಂಡ್ಯ, ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ ಒಂದು ಪ್ರಶಸ್ತಿ ಸಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X