ಸಂಚಾರ ದಂಡ ಪಾವತಿಯಲ್ಲಿ ಶೇ.50ರಷ್ಟು ವಿನಾಯಿತಿ: ಜೂ.21ರಿಂದ ಜು.10ರವರೆಗೆ ಪಾವತಿಗೆ ಅವಕಾಶ

ಸಾಂದರ್ಭಿಕ ಚಿತ್ರ (AI)
ಬೆಂಗಳೂರು: ರಾಜ್ಯದಲ್ಲಿ ಒಟ್ಟು 5.05 ಕೋಟಿ ಸಂಚಾರ ನಿಯಮ ಉಲಂಘನೆ ಪ್ರಕರಣಗಳಲ್ಲಿ 2,727 ಕೋಟಿ ರೂ. ದಂಡ ಪಾವತಿಯಾಗಬೇಕಿದೆ. ಹೀಗಾಗಿ ರಾಜ್ಯ ಸರಕಾರವು ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಶೇ.50ರಷ್ಟು ವಿನಾಯಿತಿ ನೀಡಿದ್ದು, ಜೂ.21ರಿಂದ ಜು.10ರವರೆಗೆ ದಂಡ ಪಾವತಿಸಲು ಅವಕಾಶ ನೀಡಿದೆ.
2023ರಲ್ಲಿ 3 ಬಾರಿ 2025ರಲ್ಲಿ 2 ಬಾರಿ ಸಂಚಾರ ದಂಡ ಪಾವತಿಗೆ ರಿಯಾಯಿತಿ ಅವಕಾಶ ನೀಡಲಾಗಿತ್ತು. ಸದ್ಯ ದಂಡ ಪಾವತಿಗೆ ರಿಯಾಯತಿ ಅವಕಾಶವನ್ನು 6ನೇ ಬಾರಿಗೆ ನೀಡಲಾಗಿದೆ.
ರಿಯಾಯಿತಿ ಅವಕಾಶ ಇರುವ ಸಂದರ್ಭದಲ್ಲಿ ನಗರದಲ್ಲಿ ವಾಹನಗಳ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ತಪಾಸಣೆ ವೇಳೆ, ಯಾವುದೇ ಬಾಕಿ ದಂಡವಿದ್ದರೆ ಸ್ಥಳದಲ್ಲೇ ಪಾವತಿಸುವಂತೆ ಸೂಚಿಸಲಾಗುತ್ತದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story




