Budget Live| ರಾಜ್ಯ ಬಜೆಟ್ 2024 - ಮುಖ್ಯಾಂಶಗಳು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದಾರೆ. ಸಿದ್ದರಾಮಯ್ಯ ಮಂಡನೆ ಮಾಡುತ್ತಿರುವ 15ನೇ ಬಜೆಟ್ ಇದಾಗಿದೆ.
Live Updates
- 16 Feb 2024 11:10 AM IST
ಅಡಿಕೆ ಬೆಳೆಗೆ ಬರುವ ರೋಗ ನಿಯಂತ್ರಣಕ್ಕೆ ಕೇಂದ್ರ ಸರಕಾರದ ಸಹಯೋಗದಲ್ಲಿ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣೆ ಚಟುವಟಿಕೆಗೆ ಉತ್ತೇಜನ
- 16 Feb 2024 11:09 AM IST
ಕೈಗೆಟಕುವ ದರದಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳ ಮತ್ತು ಮೌಲ್ಯವರ್ಧಿತ ಸಿರಿಧಾನ್ಯಗಳ ಉತ್ಪನ್ನಗಳನ್ನು ಒದಗಿಸಲು 'ನಮ್ಮ ಮಿಲ್ಲೆಟ್' ಎಂಬ ಹೊಸ ಕಾರ್ಯಕ್ರಮ ಆರಂಭ
- 16 Feb 2024 11:07 AM IST
ಕೈಗೆಟುಕುವ ದರದಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ಒದಗಿಸಲು "ನಮ್ಮ ಮಿಲ್ಲೆಟ್" ಹೊಸ ಕಾರ್ಯಕ್ರಮ ಪ್ರಾರಂಭ
- 16 Feb 2024 11:06 AM IST
ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ
- 16 Feb 2024 11:05 AM IST
ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿಸಿದ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಲಭ್ಯ
- 16 Feb 2024 11:01 AM IST
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್
Next Story





