ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ವಿಷನ್ ಗ್ರೂಪ್ ಸಮಿತಿ ರಚನೆ

ಮನ್ಸೂರ್ ಅಲಿ ಖಾನ್/ಎಲ್.ಕೆ.ಅತೀಕ್
ಬೆಂಗಳೂರು : ರಾಜ್ಯದಲ್ಲಿನ ಅಲ್ಪಸಂಖ್ಯಾತರ ಶಿಕ್ಷಣ ಸುಧಾರಣೆಗೆ ಸಂಬಂಧಪಟ್ಟಂತೆ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ಅಲ್ಪಸಂಖ್ಯಾತ ಶಿಕ್ಷಣ ವಿಷನ್ ಗ್ರೂಪ್’ ಸಮಿತಿಯನ್ನು ರಚಿಸಿ ರಾಜ್ಯ ಸರಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.
ಸಮಿತಿಯಲ್ಲಿ ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ.ಜಾಫರ್, ಮಂಗಳೂರಿನ ಎಂಇಐಎಫ್ ಗೌರವಾಧ್ಯಕ್ಷ ಉಮರ್ ಟೀಕೆ, ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಬೆಂಗಳೂರಿನ ಶಿಕ್ಷಣ ತಜ್ಞ ಡಾ.ಫ್ರಾನ್ಸಿಸ್, ಡಿ.ಎ.ಪಿಎಸ್ ಸಮೂಹ ಹಾಗೂ ಶಾಲೆಗಳ ಮುಖ್ಯಸ್ಥ ಖಾಲಿದ್ ಬೇಗ್ ನದ್ವಿ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್ಇಆರ್ಟಿ)ಯ ನಿವೃತ್ತ ನಿರ್ದೇಶಕ ಬೆಳ್ಳಶೆಟ್ಟಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಜೊತೆಗೆ, ಮೈಸೂರಿನ ಸರಕಾರಿ ಶಿಕ್ಷಕ ಶಿಕ್ಷಣ ಕಾಲೇಜಿನ ರೀಡರ್ ರುಕ್ಸಾನಾ ನಾಝ್ನೀನ್, ಅಝೀಂ ಪ್ರೇಮ್ ಜಿ ಫೌಂಡೇಶನ್ ಪ್ರತಿನಿಧಿ ರುದ್ರೇಶ್, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶೌಕತ್ ಅಝೀಮ್, ಲೀಡ್ ಗ್ರೂಪ್ನ ಮಾಜಿ ಸಿಇಒ ಶ್ರೀನಿವಾಸನ್ ತಿಮ್ಮರಾಯನ್, ಫಾಲ್ಕನ್ ಸಮೂಹ ಶಿಕ್ಷಣ ಸಂಸ್ಥೆಗಳ ಅಬ್ದುಲ್ ಸುಭಾನ್, ಶಿಕ್ಷಣ ತಜ್ಞೆ ಆಯಿಶಾ ಫರ್ಝಾನಾ ಯು.ಟಿ., ವಿಶೇಷ ಶಿಕ್ಷಕ ಡಾ.ರುಕ್ಸಾನಾ ಹಸನ್ ಅವರನ್ನು ಸದಸ್ಯರನ್ನಾಗಿ ಹಾಗೂ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.






