ʼವದಂತಿಗಳಿಗೆ ಕಿವಿಗೊಡಬೇಡಿʼ : ಮೇ 16ರಂದೇ ಕರ್ನಾಟಕ ಮುಸ್ಲಿಮ್ ಸಮಾವೇಶ ನಡೆಯಲಿದೆ : ಸಂಘಟಕರು

ಬೆಂಗಳೂರು, ಮೇ 15 : ಬೆಂಗಳೂರಿನ ಟೌನ್ ಹಾಲ್ ನಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ಕರ್ನಾಟಕ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಯೋಜಿಸಿರುವ ಕರ್ನಾಟಕ ಮುಸ್ಲಿಮ್ ಸಮಾವೇಶ ಈ ಹಿಂದೆ ನಿಗದಿಪಡಿಸಿದಂತೆಯೇ ನಡೆಯಲಿದೆ, ಅದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಮಾವೇಶದ ಸಂಚಾಲಕರಾದ ಸುಹೈಲ್ ಅಹ್ಮದ್ ಮರೂರು, ತನ್ವೀರ್ ಅಹ್ಮದ್ ಹಾಗೂ ಯಾಹ್ಯ ದಾಮುದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾವೇಶದ ತಯಾರಿ ಅಂತಿಮ ಹಂತದಲ್ಲಿದೆ. ರಾಜ್ಯದ ಎಲ್ಲೆಡೆಯಿಂದ 45 ಕ್ಕೂ ಹೆಚ್ಚು ಮುಸ್ಲಿಮ್ ಸಂಘಟನೆಗಳು , ಸಂಘ ಸಂಸ್ಥೆಗಳು ಹಾಗು ಜಮಾಅತ್ ಗಳು ಸಮಾವೇಶಕ್ಕೆ ಬೆಂಬಲ ಸೂಚಿಸಿ ಸಕ್ರಿಯವಾಗಿ ಭಾಗವಹಿಸುವ ಭರವಸೆ ನೀಡಿವೆ. ಸಮಾವೇಶ ನಿಗದಿಯಂತೆಯೇ ನಡೆಯಲಿದೆ ಎಂದು ಸಂಘಟಕರು ಹೇಳಿದ್ದಾರೆ.
ಹಿಜಾಬ್ ಮೇಲಿನ ನಿರ್ಬಂಧವನ್ನು ಸರಕಾರ ಹಿಂಪಡೆದಿದೆ. ಆದರೆ ಇನ್ನೂ 9 ಪ್ರಮುಖ ಆಗ್ರಹಗಳು ಈಡೇರಬೇಕಿದೆ. ಆ ಸಂವಿಧಾನ ಬದ್ಧ ಆಗ್ರಹಗಳನ್ನು ಇನ್ನೂ ತಡಮಾಡದೆ ಈಡೇರಿಸುವಂತೆ ಸರಕಾರಕ್ಕೆ ಹೇಳಲು ಈ ಸಮಾವೇಶ ನಡೆಯಲಿದೆ ಎಂದು ಸಂಘಟಕರು ಹೇಳಿದ್ದಾರೆ.
Next Story






