ರಾಷ್ಟ್ರೀಯ ಮಿಕ್ಸ್ ಬಾಕ್ಸಿಂಗ್: ಕರ್ನಾಟಕಕ್ಕೆ 3ನೇ ಸ್ಥಾನ

ಮಡಿಕೇರಿ ಜ.2 : ಮಹಾರಾಷ್ಟ್ರದಲ್ಲಿ ನಡೆದ ಆರನೇ ವರ್ಷದ ರಾಷ್ಟ್ರೀಯ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡ ಮೂರನೇ ಸ್ಥಾನ ಪಡೆದುಕೊಂಡಿದೆ.
ವಿವಿಧ ರಾಜ್ಯಗಳ ನಡುವೆ ನಡೆದ ಪೈಪೋಟಿಯಲ್ಲಿ ಕರ್ನಾಟಕ ತಂಡಕ್ಕೆ 17 ಚಿನ್ನ, 7 ಬೆಳ್ಳಿ ಹಾಗೂ 12 ಕಂಚಿನ ಪದಕ ದೊರೆತಿದೆ.
ಕರ್ನಾಟಕ ರಾಜ್ಯ ಮಿಕ್ಸ್ ಬಾಕ್ಸಿಂಗ್ ಸಂಸ್ಥೆಯ ಅಧ್ಯಕ್ಷ ಚಂದ್ರು ಡಿ, ಪ್ರಧಾನ ಕಾರ್ಯದರ್ಶಿ ಎನ್.ಸಿ.ಸುದರ್ಶನ್ ಹಾಗೂ ತರಬೇತುದಾರ ಆರ್.ಹರೀಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕೊಡಗಿನ ವಿದ್ಯಾರ್ಥಿಗಳು ಕೂಡ ಪದಕಗಳನ್ನು ಗೆದ್ದಿದ್ದಾರೆ.
Next Story





