ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾಗಿ ಎಂಟು ಮಂದಿ ನಾಮನಿರ್ದೇಶನ

ಬೆಂಗಳೂರು: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರನ್ನಾಗಿ ಎಂಟು ಮಂದಿಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೊ ಅಲ್ಲಿಯವರೆಗೆ ನಾಮನಿರ್ದೇಶನ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ʼವಾರ್ತಾಭಾರತಿʼಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಬೆಂಗಳೂರಿನ ಮುಹಮ್ಮದ್ ಇಸ್ಮಾಯಿಲ್, ನಿವೃತ್ತ ಐಎಎಸ್ ಅಧಿಕಾರಿ ನಿಖ್ಖತ್ ತಬಸ್ಸುಮ್ ಆಬ್ರೂ, ಕೆ.ಆರ್.ಜೋಬಿ, ಮೈಸೂರಿನ ಮಸ್ರೂರ್ ಅಹ್ಮದ್, ಹಾವೇರಿಯ ಪರಿಮಳಾ ಜೈನ್, ಬೀದರ್‌ನ ಮನದೀಪ್ ಕೌರ್ ಹಾಗೂ ಮೈಸೂರಿನ ಜೆಕ್‌ಮೇಟ್ ವಾಂಗದೂಸ್ ಜ್ಯೋತಿ ಅವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಎಂ.ಜ್ಯೋತಿ ಪ್ರಕಾಶ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
Next Story





