21 ಮಂದಿ ಕೆಎಎಸ್ ಅಧಿಕಾರಿಗಳಿಗೆ ಹಿರಿಯ ಶ್ರೇಣಿಗೆ ಮುಂಭಡ್ತಿ

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಹರ್ಷವರ್ಧನ್ ಎಸ್.ಜೆ. ಅವರು ಸೇರಿದಂತೆ 21 ಮಂದಿ ಕಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ 1,18,700 ರೂ.ಗಳಿಂದ 1,75,200 ರೂ.ವೇತನ ಶ್ರೇಣಿಯ ಕೆಎಎಸ್ (ಹಿರಿಯ ಶ್ರೇಣಿ) ವೃಂದಕ್ಕೆ ಮುಂಭಡ್ತಿ ನೀಡಿ ಆದೇಶ ಹೊರಡಿಸಲಾಗಿದೆ.
ಸ್ಥಳ ನಿಯುಕ್ತಿ: ತಿಪಟೂರು ಉಪ ವಿಭಾಗದ ಸಹಾಯಕ ಆಯುಕ್ತೆ ಸಪ್ತಶ್ರೀ ಬಿ.ಕೆ. ಅವರನ್ನು ಸಹಾಯಕ ಆಯುಕ್ತೆ, ತಿಪಟೂರು ಉಪ ವಿಭಾಗ ಹುದ್ದೆಯನ್ನು ಕೆಎಎಸ್ (ಹಿ.ಶ್ರೇ) ವೃಂದಕ್ಕೆ ಉನ್ನತೀಕರಿಸಿ ಹಾಗೆ ಉನ್ನತೀಕರಿಸಿದ ಹುದ್ದೆಯಲ್ಲಿಯೇ ಮುಂದುವರಿಸಲಾಗಿದೆ.
ಅದೆ ರೀತಿಯಲ್ಲಿ ಅರ್ಜುನ್ ಒಡೆಯರ್ ಹೆಚ್ಚುವರಿ ಅಭಿಯಾನ ನಿರ್ದೇಶಕ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಬೆಂಗಳೂರು. ಅಪೇಕ್ಷಾ ಸತೀಶ್ ಪವಾರ್ ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ನೆಲಮಂಗಲ-ಕುಣಿಗಲ್ ವಿಭಾಗ, ಕುಣಿಗಲ್. ಅಭಿಷೇಕ್ ವಿ. ಸಹಾಯಕ ಆಯುಕ್ತ, ಹೊನ್ನಾಳಿ ಉಪ ವಿಭಾಗ, ಹೊನ್ನಾಳಿ. ವಿಷ್ಣುವರ್ಧನ ರೆಡ್ಡಿ, ಟಿ.ಎಸ್. ಉಪ ಕಾರ್ಯದರ್ಶಿ-3 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.
ಕಾರ್ತಿಕ್ ಎಂ. ಮುಖ್ಯ ಆಡಳಿತಾಧಿಕಾರಿ, ಸಂಜಯ್ ಗಾಂಧಿ ಇನ್ಸಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್, ಬೆಂಗಳೂರು. ಬಸವಣಪ್ಪ ಕಲಶೆಟ್ಟಿ ಸಹಾಯಕ ಆಯುಕ್ತ, ಲಿಂಗಸಗೂರು ಉಪವಿಭಾಗ, ಲಿಂಗಸಗೂರು. ವಿವೇಕಾನಂದ ಪಿ. ಸಹಾಯಕ ಆಯುಕ್ತ, ಹೊಸಪೇಟೆ ಉಪ ವಿಭಾಗ, ಹೊಸಪೇಟೆ. ಶೃತಿ ಎಂ.ಕೆ. ಸಹಾಯಕ ಆಯುಕ್ತೆ, ಸಕಲೇಶಪುರ ಉಪ ವಿಭಾಗ, ಹಾಸನ ಜಿಲ್ಲೆ. ಪರ್ಣಿಕ ಪವನರಾಮ್ ಜನರಲ್ ಮ್ಯಾನೇಜರ್(ಬಿಟಿ), ಕೆಐಟಿಎಸ್, ಬೆಂಗಳೂರು.
ಮಾರುತಿ ಬ್ಯಾಕೋಡ ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ದಾವಣಗೆರೆ. ಕೃಪಾಲಿನಿ ಜಿ.ಕೆ. ಭೂಸ್ವಾಧೀನಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು. ಉಮೇಶ್ ಡಿ.ಎಸ್. ಉಪ ಕಾರ್ಯದರ್ಶಿ-1, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು. ವಂದನ ಭಟ್ ಎಸ್.ಎ. ಉಪ ಚುನಾವಣಾ ಅಧಿಕಾರಿ, ಸಿಆಸುಇ(ಚುನಾವಣೆಗಳು) ಬೆಂಗಳೂರು. ಮೊಹಮ್ಮದ್ ಖೈಜರ್ ಜನರಲ್ ಮ್ಯಾನೇಜರ್ (ಆಡಳಿತ ಮತ್ತು ಮಾನವ ಸಂಪನ್ಮೂಲ), ಹೆಸ್ಕಾಂ, ಹುಬ್ಬಳ್ಳಿ.
ಮಹೇಶ್ ಬಿ.ಆರ್. ಸಹಾಯಕ ಆಯುಕ್ತ, ಕೊಳ್ಳೇಗಾಲ ಉಪ ವಿಭಾಗ. ದೇವರಾಜ್ ಆರ್. ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ಧಾರವಾಡ. ಶ್ರವಣ್ ನಾಯಕ್ ಸಹಾಯಕ ಆಯುಕ್ತರು, ಬೆಳಗಾವಿ ಉಪ ವಿಭಾಗ. ಸಂತೋಷ್ ಬಿ. ಜಗಲಸಾರ ಸಹಾಯಕ ಆಯುಕ್ತ, ಬಾಗಲಕೋಟೆ ಉಪ ವಿಭಾಗ ಹಾಗೂ ನಯನ ಎನ್. ಉಪ ಪ್ರಧಾನ ವ್ಯವಸ್ಥಾಪಕ್ತಿ, ಕೆಯುಐಡಿಎಫ್‍ಸಿ, ಬೆಂಗಳೂರು.
ಮೇಲ್ಕಂಡ ಎಲ್ಲ ಅಧಿಕಾರಿಗಳನ್ನು ಕೆಎಎಸ್ ಕಿರಿಯ ಶ್ರೇಣಿಯಿಂದ ಮುಂಭಡ್ತಿ ನೀಡಿ ಅವರು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳನ್ನು(ಕೆಎಎಸ್ ಹಿರಿಯ ಶ್ರೇಣಿ ಹುದ್ದೆಗೆ) ಉನ್ನತ್ತೀಕರಿಸಿ ಹಾಗೇ ಉನ್ನತ್ತೀಕರಿಸಿದ ಹುದ್ದೆಯಲ್ಲಿಯೇ ಮುಂದುವರಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಕೇಶವ ಪ್ರಸಾದ್ ಕೆ.ಎಚ್. ಅವರು ಆದೇಶ ಹೊರಡಿಸಿದ್ದಾರೆ.







