ಉತ್ತಮ ಅಧಿಕಾರಿ, ನೌಕರರಿಗೆ ಕೆಂಪೇಗೌಡ ಪ್ರಶಸ್ತಿ: 51 ಮಂದಿ ಆಯ್ಕೆ

PC : wikipedia
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ‘ನಾಡಪ್ರಭು ಕೆಂಪೇಗೌಡರ ಜಯಂತಿ’ ಪ್ರಯುಕ್ತ ನೀಡುವ 2025ನೇ ಸಾಲಿನ ಉತ್ತಮ ಅಧಿಕಾರಿ, ನೌಕರರ ಪ್ರಶಸ್ತಿಗಳಿಗೆ ಮುಖ್ಯ ಅಭಿಯಂತರರಾದ ಸುಗುಣ, ಆರೋಗ್ಯಾಧಿಕಾರಿ ನಯನತಾರಾ ಪಾಟೀಲ್, ಉಪನ್ಯಾಸಕಿ ಸಮೀನಾ ಬಾನು ಸೇರಿದಂತೆ 51 ಮಂದಿ ಆಯ್ಕೆಯಾಗಿದ್ದಾರೆ.
ಜೂ.27ರಂದು ಇಲ್ಲಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿ ಆವರಣದಲ್ಲಿ ‘ನಾಡಪ್ರಭು ಕೆಂಪೇಗೌಡರ ಜಯಂತಿ’ ಆಚರಣೆ ಮಾಡಲಾಗುತ್ತಿದ್ದು, ಪ್ರಾಧಿಕಾರದ ಅಧಿಕಾರಿ, ನೌಕರರಿಗೆ ಉತ್ತಮ ಅಧಿಕಾರಿ, ನೌಕರರ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
51 ಮಂದಿ ಆಯ್ಕೆ:
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುರೇಶ್, ಕಂದಾಯ ಪರಿವೀಕ್ಷಕ ಕೃಷ್ಣಪ್ಪ, ಚಾಲಕ ಜಯರಾಮ್, ಪೌರಕಾರ್ಮಿಕರಾದ ನಾಗಮ್ಮ, ಕಂದಾಯ ಮೌಲ್ಯಮಾಪಕ ಶ್ರೀಧರ್, ಕಂದಾಯ ಪರಿವೀಕ್ಷಕ ಸ್ವಾಮಿ, ಪ್ರಥಮ ದರ್ಜೆ ಸಹಾಯಕ ಪಾಲ್ಗುಣಿ ರವಿಕುಮಾರ್, ದ್ವಿತೀಯ ದರ್ಜೆ ಸಹಾಯಕ ಸಿ.ಎಂ. ಮುನಿರಾಜು, ಪೌರಕಾರ್ಮಿಕ ಕೆ. ಮುನಿರಾಜು, ಕಂದಾಯ ಪರಿವೀಕ್ಷಕ ವಿ. ಶ್ರೀನಿವಾಸ್, ಕಂದಾಯ ಪರಿವೀಕ್ಷಕಿ ಶಿಲ್ಪ, ಕಂದಾಯ ವಸೂಲಿಗಾರರಾದ ದೀಪಕ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದ್ವಿತೀಯ ದರ್ಜೆ ಸಹಾಯಕ ನಂಜಪ್ಪ, ಮೌಲ್ಯಮಾಪಕ ರಾಮಕೃಷ್ಣ ಕೆ, ಪೌರಕಾರ್ಮಿಕ ಯಶೋದಮ್ಮ, ಆರೋಗ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮೀ, ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಪಾವನ ನಾಗತಿ, ಕಂದಾಯ ಪರಿವೀಕ್ಷಕರಾದ ಮಲ್ಲೇಶ್, ಗನ್ ಮ್ಯಾನ್ ದೊಡ್ಡಪ್ಪಯ್ಯ, ಪೌರಕಾರ್ಮಿಕ ಚೌಡೇಶ್ವರಿ, ಸ್ಯಾನಿಟರಿ ದಫೇದರ್ ಶಿವರಾಮೇಗೌಡ, ಪ್ರಥಮ ದರ್ಜೆ ಸಹಾಯಕಿ ಲೋಕೇಶ್ವರಿ ಕೆ., ಕೆಲಸ ಪರಿವೀಕ್ಷಕ ರಂಗಧಾಮಯ್ಯ ಎಂ. ಕೆ., ಹಿರಿಯ ಚಾಲಕ ರತ್ನಂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಚಾಲಕ ಹನುಮಂತ, ಪೌರಕಾರ್ಮಿಕ ಕೆ. ವರಲಕ್ಷ್ಮೀ, ಡಿ ಗ್ರೂಪ್ ನೌಕರ ಶಿವಲಿಂಗ, ನೌಕರ ಶಿವಣ್ಣ ಕೆ.ಸಿ, ದ್ವಿತೀಯ ದರ್ಜೆ ಸಹಾಯಕ ರಾಜೇಶ್ ಬಿ, ದ್ವಿತೀಯ ದರ್ಜೆ ಸಹಾಯಕ ಬೋರಯ್ಯ, ಗನ್ ಮೆನ್ ವೇಲು ಎಂ, ಗನ್ ಮೆನ್ ಶಂಕರ್ ಸಿಂಗ್, ಪೌರಕಾರ್ಮಿಕ ಲಕ್ಷ್ಮಯ್ಯ, ಪ್ರಥಮ ದರ್ಜೆ ಸಹಾಯಕ ಧನಂಜಯ, ವಾಹನ ಚಾಲಕ ಅನಂತ ರಾವ್, ನಾಲ್ಕನೇ ದರ್ಜೆ ನೌಕರ ವಿಜಯ, ಪೌರಕಾರ್ಮಿಕ ಕೃಷ್ಣಮೂರ್ತಿ ಪಿ. ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದ್ವಿತೀಯ ದರ್ಜೆ ಸಹಾಯಕ ಸುರೇಶ್ ಕುಮಾರ್, ತೋಟಗಾರಿಕೆ ಮಾಲಿ ವೆಂಕಟೇಶ್, ದ್ವಿತೀಯ ದರ್ಜೆ ಸಹಾಯಕ ಕಾರ್ತಿಕ್ ವಿ., ಪೌರಕಾರ್ಮಿಕರಾದ ಯಶೋದಮ್ಮ, ನೌಕರರಾದ ಎಚ್. ಕೆ. ತಿಪ್ಪೇಶ್, ಕಂದಾಯ ಪರಿವೀಕ್ಷಕ ಅಮರನಾಥ್, ಉಪ ಆರೋಗ್ಯಧಿಕಾರಿ ಡಾ. ಕಲಾವತಿ, ಮೌಲ್ಯಮಾಪಕರಾದ ಸಾಯಿಶಂಕರ್, ಹೆಲ್ತ್ ಸೂಪರ್ ವೈಸರ್ ಅನಿಸ್ ಫಾತಿಮಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.







