ಮುಖ್ಯಮಂತ್ರಿ ಮೇಲೆ ಮಾಟ-ಮಂತ್ರ : ಕೆ.ಎನ್.ರಾಜಣ್ಣ ಶಂಕೆ

ಕೆ.ಎನ್.ರಾಜಣ್ಣ/ಸಿದ್ದರಾಮಯ್ಯ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಷ್ಟೊಂದು ಅಸಹಾಯಕ ರೀತಿಯಲ್ಲಿದ್ದಾರೆ ಎಂದರೆ ಯಾರೋ ಅವರಿಗೆ ಮಾಟ-ಮಂತ್ರ ಮಾಡಿಸಿರಬಹುದು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಸಂಶಯ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಇಲ್ಲಿನ ಶಾಸಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಮಾಟ ಮಂತ್ರ ನಂಬಲ್ಲ. ಆದರೆ ಗಟ್ಟಿಯಾಗಿ ನಿಲ್ಲಿ ಎಂದು ಹೇಳಿಸಿಕೊಳ್ಳುವಷ್ಟು ಮುಖ್ಯಮಂತ್ರಿ ಅಸಹಾಯಕರಲ್ಲ. ಆದರೆ ಮಾಟ ಮಂತ್ರದ ಬಗ್ಗೆ ಜನ ಮಾತಾಡುತ್ತಿದ್ದಾರೆ ಎಂದಿದ್ದಾರೆ ಎಂದರು.
ಸಿಎಂ ಕೆಲ ವಿಚಾರದಲ್ಲಿ ನಡೆದುಕೊಂಡಿದ್ದಕ್ಕೆ ಹಾಗೆ ಮಾತನಾಡುತ್ತಾರೆ. ಯಾರಾದರೂ ಮಾಟ ಮಂತ್ರ ಮಾಡಿಸಿರಬಹುದು ಎನ್ನುವ ಮಾತುಗಳು ಕೇಳಿಬಂದಿವೆ. ನನ್ನ ಮೇಲೆಯೂ ಹಿಂದೆ ಮಾಟಮಂತ್ರ ಆಗಿತ್ತು. ನಾನು ಚುನಾವಣೆ ನಿಂತಾಗೆಲ್ಲಾ ಮನೆ ಸುತ್ತ ಹಳದಿ ನೀರು, ಏನೇನೋ ಹಾಕಲಾಗಿತ್ತು ಎಂದು ಅವರು ಉಲ್ಲೇಖಿಸಿದರು.
ಯಾರೇ ಆಗಲಿ ನೋಟಿಸ್ ಕೊಟ್ಟು ಕೇಳುವುದು ಸೌಜನ್ಯ. ಆರೋಪಕ್ಕೆ ನೋಟಿಸ್ ಕೊಡಲೇಬೇಕು ಎಂದಿಲ್ಲ. ಆದರೂ ಮೌಖಿಕವಾಗಿ ಮಾಹಿತಿ ಪಡೆಯಬೇಕಿತ್ತು. ಒಟ್ಟಿನಲ್ಲಿ ಕಾಂಗ್ರೆಸ್ನಿಂದ ಮುಸ್ಲಿಮರಿಗೆ, ಮುಸ್ಲಿಮರಿಂದ ಕಾಂಗ್ರೆಸ್ಗೆ ಸಹಾಯ ಆಗಿದೆ ಎಂದು ರಾಜಣ್ಣ ಹೇಳಿದರು.






