ಮೇ ಅಂತ್ಯದಲ್ಲಿ ರಾಜಕೀಯ ಬದಲಾವಣೆ : ಕೆ.ಎನ್.ರಾಜಣ್ಣ

ಬೆಂಗಳೂರು, ಮೇ 12 : ಮೇ ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂದು ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣಾ ಪ್ರಕ್ರಿಯೆ ಪೂರ್ಣ ಆಗಿಲ್ಲ. ಸಂಪೂರ್ಣವಾಗಿ ಅದು ಆಗಲಿ. ಕೇರಳ ಮುಖ್ಯಮಂತ್ರಿ ಆಯ್ಕೆ ಬಾಕಿ ಇದೆ. ಅದು ಪೂರ್ಣವಾದ ನಂತರ ಏನೆಲ್ಲಾ ಬೆಳವಣಿಗೆಗಳು ಆಗುತ್ತವೆ ಹೇಳುತ್ತೇನೆ. ನಾನು ಮೇ ತಿಂಗಳಲ್ಲಿ ಬದಲಾವಣೆಗಳು ಆಗುತ್ತವೆ ಎಂದು ಹೇಳಿದ್ದು, ಅದಕ್ಕೆ ಬದ್ಧವಾಗಿದ್ದೇನೆ ಎಂದರು.
ಸಂಪುಟ ಪುನಾರಚನೆಗೆ ಅವಕಾಶ ಮಾಡಬೇಕೆಂದು ಅನೇಕರು ಒತ್ತಡ ಹಾಕಿದ್ದಾರೆ. ಬಹಳಷ್ಟು ಶಾಸಕರು ಹೊಸದಿಲ್ಲಿಗೆ ಹೋಗಿ ಎಲ್ಲ ಮುಖಂಡರುಗಳನ್ನು ಭೇಟಿ ಮಾಡಿ ಒತ್ತಡ ತಂದಿದ್ದಾರೆ. ನಾಯಕತ್ವ ಬದಲಾವಣೆ ಮಾಡುತ್ತೇವೆಂದು ಹೈಕಮಾಂಡ್ ಹೇಳಬೇಕು ಎಂದೂ ಅವರು ಉಲ್ಲೇಖಿಸಿದರು.
Next Story




