KPSC ನೇಮಕಾತಿ ಹಗರಣ; ಪ್ರಾಸಿಕ್ಯೂಷನ್ ದೂರು ದಾಖಲಿಸಿದ ಈ.ಡಿ

ಸಾಂದರ್ಭಿಕ ಚಿತ್ರ | PC : PTI
ಬೆಂಗಳೂರು : KPSC ನೇಮಕಾತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ(ಈ.ಡಿ) ಬೆಂಗಳೂರು ವಲಯ ಅಧಿಕಾರಿಗಳು, ಶಿವಶಂಕರಪ್ಪ ಸಾಹುಕಾರ್, ಬಿ.ವಿ ಗೀತಾ, ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಬಸವರಾಜ್ ಕನ್ನಾಳೆ ವಿರುದ್ದ ಪ್ರಾಸಿಕ್ಯೂಷನ್ ದೂರು ದಾಖಲಿಸಿದ್ದಾರೆ.
Prevention of money laundering act 2002(PMLA) ಕಾಯ್ದೆಯ ಸೆಕ್ಷನ್ 44 ಮತ್ತು 45 ಅಡಿಯಲ್ಲಿ ಪಿಎಂಎಲ್ ಎ ಕಾಯ್ದೆಯ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.
ಈ ಹಿಂದೆ ಪ್ರಕರರಣದ ತನಿಖೆಯನ್ನು ಸಿಐಡಿ ನಿರ್ವಹಿಸಿತ್ತು. ಇದೇ ವೇಳೆ ಈ.ಡಿ ಕೂಡ ದಾಳಿ ಮಾಡಿ ಪ್ರತ್ಯೇಕ ತನಿಖೆಯನ್ನು ಕೈಗೊಂಡಿತ್ತು. ಸದ್ಯ ಹೈಕೋರ್ಟ್ ನಿಂದ ಸೂಚಿತವಾಗಿರುವ ಎಸ್ ಐ ಟಿ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.
Next Story




