KPSC ನೇಮಕಾತಿ ಹಗರಣ: ಶಾಂತ ಹೊಸಮನಿ ವಿರುದ್ದ ಲುಕೌಟ್ ನೋಟೀಸ್

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಸದಸ್ಯೆ ಶಾಂತ ಹೊಸಮನಿ ವಿರುದ್ಧ ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಲುಕೌಟ್ ನೋಟಿಸ್ ಹೊರಡಿಸಲಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಶಿವಶಂಕರಪ್ಪ ಮನೆ ಮೇಲೆ ED ಅಧಿಕಾರಿಗಳು ದಾಳಿಮಾಡಿದ್ದರು. ಈ ವೇಳೆ ಶಾಂತ ಹೊಸಮನಿ ಮನೆಯ ಮೇಲೂ ದಾಳಿಮಾಡಲಾಗಿತ್ತು. ಆದರೆ KPSC ಸದಸ್ಯೆ ಶಾಂತ ಹೊಸಮನಿ ಅಂದಿನಿಂದ ನಾಪತ್ತೆಯಾಗಿದ್ದಾರೆ. ಇತ್ತ ED ವಿಚಾರಣೆಗಾಗಲಿ ಅಥವಾ ಸಿಐಡಿ ವಿಚಾರಣೆಗಾಗಲಿ ಶಾಂತ ಹೊಸ ಮನಿ ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.
ಈ ಹಿನ್ನಲೆ ಸಿಐಡಿ ಪೊಲೀಸರು ಶಾಂತ ಹೊಸಮನಿ ದೇಶ ಬಿಟ್ಟು ಪರಾರಿಯಾಗದಂತೆ ಲುಕೌಟ್ ನೊಟೀಸ್ ಜಾರಿ ಮಾಡಿದ್ದಾರೆ.
Next Story




