ಕೆಎಸ್ಸಾರ್ಟಿಸಿ ನೇಮಕಾತಿ: ಡಿ.26ರಿಂದ 28ರ ವರೆಗೆ ದಾಖಲಾತಿ, ದೇಹದಾರ್ಢ್ಯತೆ ಪರಿಶೀಲನೆ

ಸಾಂದರ್ಭಿಕ ಚಿತ್ರ
ಬೆಂಗಳೂರು: ಕೆಎಸ್ಸಾರ್ಟಿಸಿಯ ತಾಂತ್ರಿಕ ಸಹಾಯಕ ಹುದ್ದೆಗಳ ನೇರ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲಿ 29ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಅಭ್ಯರ್ಥಿಗಳಿಗೆ ಡಿ.26ರಿಂದ ಡಿ.28ರ ವರೆಗೆ ಇಲ್ಲಿನ ಶಾಂತಿನಗರದಲ್ಲಿ ದಾಖಲಾತಿ, ದೇಹದಾರ್ಢ್ಯತೆ ಪರಿಶೀಲನೆ ನಡೆಸಲಾಗುವುದು ಎಂದು ನಿಗಮ ತಿಳಿಸಿದೆ.
ಕೆಎಸ್ಸಾರ್ಟಿಸಿ ಜಾಹೀರಾತು ಸಂಖ್ಯೆ 1/2018ರ ಅನ್ವಯ ತಾಂತ್ರಿಕ ಸಹಾಯಕ ಹುದ್ದೆಗಳ ನೇರ ನೇಮಕಾತಿಗಾಗಿ ಹೊರಡಿಸಲಾಗಿದ್ದ ಅಧಿಸೂಚನೆಯಂತೆ ಹುದ್ದೆಗಳ ಸಂಖ್ಯೆಯನ್ನು 300ಕ್ಕೆ ಸೀಮಿತಗೊಳಿಸಿ ಹುದ್ದೆಗಳ ವರ್ಗೀಕರಣವನ್ನು ಪ್ರಕಟಿಸಲಾಗಿದೆ.
ದಾಖಲಾತಿ, ದೇಹದಾಢ್ರ್ಯತೆ ಪರಿಶೀಲನೆಗೆ ಡಿ.18ರಂದು ಹಾಲ್ ಟಿಕೆಟ್ಅನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ksrtcjobs.com ವೆಬ್ಸೈಟ್ಗೆ ಅಥವಾ ದೂರವಾಣಿ ಸಂಖ್ಯೆ 080-2222 1321 ಮೊಬೈಲ್ ಸಂಖ್ಯೆ-77609 90061, 77609 90044, 77609 81930 ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





