ನಿಗಮ ಮಂಡಳಿ ನೇಮಕಾತಿಗೆ ಅಂತಿಮ ಕಸರತ್ತು: ಸುರ್ಜೇವಾಲ ನೇತೃತ್ವದಲ್ಲಿ ಸಭೆ
ಸಂಭಾವ್ಯ ಶಾಸಕರ ಪಟ್ಟಿ ಇಲ್ಲಿದೆ

ರಣದೀಪ್ ಸಿಂಗ್ ಸುರ್ಜೇವಾಲ (PTI)
ಬೆಂಗಳೂರು: ಸರ್ಕಾರದ ನಿಗಮ ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಾತಿ ಪಟ್ಟಿಗೆ ಅಂತಿಮ ಕಸರತ್ತು ನಡೆಯುತ್ತಿದ್ದು, ಈ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸಭೆ ನಡೆಯುತ್ತಿದ್ದು, ಸಂಭಾವ್ಯರ ಪಟ್ಟಿ ಸಿದ್ಧವಾಗಿದೆ ಎನ್ನಲಾಗಿದೆ. ಹಿರಿಯ ಶಾಸಕರಿಗೆ ದೂರವಾಣಿ ಕರೆ ಮಾಡಿ ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡುತ್ತಿದ್ದು, ಮೊದಲು ನಿಗಮ, ಮಂಡಳಿ ಸ್ಥಾನ ವಹಿಸಿಕೊಳ್ಳುವಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜೊತೆ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಸಚಿವರಾದ ಜಿ. ಪರಮೇಶ್ವರ್, ಕೆ.ಜೆ.ಜಾರ್ಜ್ ಕೂಡ ಭಾಗವಹಿಸಿದ್ದಾರೆ. ಸಭೆ ನಡುವೆಯೇ ಹಿರಿಯ ಶಾಸಕರಿಗೆ ಸುರ್ಜೇವಾಲ ದೂರವಾಣಿ ಕರೆ ಮಾಡಿ ನಿಗಮ ಮಂಡಳಿ ಜವಾಬ್ದಾರಿ ನಿಭಾಯಿಸಬೇಕೆಂದು ಸೂಚನೆ ನೀಡಿದ್ದಾರೆ.
ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ಅವರ ಜೊತೆಗೂ ಸುರ್ಜೇವಾಲ ಸಭೆ ನಡೆಸಿದ್ದು, ಈ ವೇಳೆ ನಿಗಮ, ಮಂಡಳಿ ನಿರಾಕರಿಸಿದ ಸ್ಥಾನವನ್ನು ರಾಯರೆಡ್ಡಿ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಭಾವ್ಯರ ಶಾಸಕರ ಪಟ್ಟಿ ಇಲ್ಲಿದೆ:
ಪಿ.ಎಂ ನರೇಂದ್ರ ಸ್ವಾಮಿ
ರಮೇಶ್ ಬಾಬು ಬಂಡಿಸಿದ್ದೇಗೌಡ
ಅನಿಲ್ ಚಿಕ್ಕಮಾದು
ಟಿ.ಡಿ ರಾಜೇಗೌಡ
ಶಿವಲಿಂಗೇಗೌಡ
ಬಿ.ಕೆ ಸಂಗಮೇಶ್
ಬಂಗಾರಪೇಟೆ ನಾರಾಯಣಸ್ವಾಮಿ
ಕೆ.ವೈ ನಂಜೇಗೌಡ
ಬಿ.ಆರ್ ಪಾಟೀಲ್
ಗಣೇಶ್ ಹುಕ್ಕೇರಿ
ಮಹಾಂತೇಶ್ ಕೌಜಲಗಿ
ಯಶವಂತ್ ರಾಯ್ ಗೌಡ ಪಾಟೀಲ್
ಬಿ.ಜಿ ಗೋವಿಂದಪ್ಪ
ರಾಘವೇಂದ್ರ ಹಿಟ್ನಾಳ್
ರಘುಮೂರ್ತಿ
ಭೀಮಣ್ಣ ನಾಯ್ಕ್
ಸತೀಶ್ ಸೈಲ್
ಪ್ರಸಾದ್ ಅಬ್ಬಯ್ಯ
ಜಿ.ಟಿ ಪಾಟೀಲ್
ಡಿ.ಆರ್ ಪಾಟೀಲ್
ಬಸನಗೌಡ ತುರುವಿಹಾಳ್







