ರಾಜ್ಯ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಮಿಂಚಿದ ಎಂ ಟೈಗರ್ಸ್ ತಂಡ

ಮಂಗಳೂರು, ಜು.16: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟೇಕ್ವಾಂಡೋ ಚಾಂಪಿಯನ್ಶಿಪ್ ನಲ್ಲಿ ಮಂಗಳೂರಿನ ಎಂ ಟೈಗರ್ಸ್ ತಂಡ ಒಂದು ಚಿನ್ನ ಎರಡು ಬೆಳ್ಳಿ ಪದಕಗಳನ್ನು ಪಡೆದಿದೆ.
21 ಕೆಜಿ ತೂಕದ ಸಬ್ ಜೂನಿಯರ್ ವಿಭಾಗದಲ್ಲಿ ಮುಸಾಬ್ ಚಿನ್ನದ ಪದಕವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರು. 60 ಕೆಜಿ ತೂಕದ ವಿಭಾಗದಲ್ಲಿ ಮುಹಮ್ಮದ್ ಶಮೀಮ್ ಮತ್ತು ಮುಹಮ್ಮದ್ ಇಸ್ಮಾಯೀಲ್ ಫಾಹಿಝ್ ಬೆಳ್ಳಿ ಪದಕ ಪಡೆದರು.
ಇವರೆಲ್ಲರೂ ಜೆಣಿಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಆಸಿಫ್ ಕಿನ್ಯ ತರಬೇತಿ ನೀಡಿದ್ದರು.
Next Story





