ಎಟ್ಟಿಕುಳಂನಲ್ಲಿ ಮದನಿ ಸಂಗಮ

ಪಯ್ಯನ್ನೂರ್ : ಶೈಖುನಾ ತಾಜುಲ್ ಉಲಮಾ ಸೈಯದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಳ್ಳಾಲ ತಂಙಳ್ ರವರ 10 ನೇ ಉರೂಸ್ ಸಮಾರಂಭದ ಅಂಗವಾಗಿ ಮದನಿ ಸಂಗಮವು ಎಟ್ಟಿಕುಳಂನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದನೀಸ್ ಅಸೋಸಿಯೇಶನ್ ಕೇಂದ್ರ ಸಮಿತಿಯ ಅಧ್ಯಕ್ಷ ತೀರ್ಥಹಳ್ಳಿ ಸೈಯದ್ ಅಬೂಬಕರ್ ಸಿದ್ದೀಕ್ ಅಲ್-ಹಾದಿ ತಂಙಳ್ ವಹಿಸಿದ್ದರು. ಶೈಖುನಾ ತಾಜುಲ್ ಉಲಮಾರ ಪುತ್ರ ಸೈಯದ್ ಹಾಮಿದ್ ಇಂಬಿಚ್ಚಿ ಕೋಯ ತಂಙಳ್ ಸಭೆಯನ್ನು ಉದ್ಘಾಟಿಸಿದರು. ಸೈಯದ್ ಅಬ್ದುಸ್ಸಲಾಂ ತಂಙಳ್ ದುಆಕ್ಕೆ ನಾಯಕತ್ವ ನೀಡಿದರು. ಮದನೀಸ್ ಅಸೋಸಿಯೇಶನ್ ಕೇರಳ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ನೀಲಗಿರಿ ಬಶೀರ್ ಮದನಿ ಕೀ ನೋಟ್ ಮಂಡಿಸಿದರು. ಅನಂತರ ಸಂಘಟನೆಯ ಅನಿವಾರ್ಯತೆ ಎಂಬ ವಿಷಯದಲ್ಲಿ ಕೂಳೂರು ಬಶೀರ್ ಮದನಿ ಮತ್ತು ಆಧ್ಯಾತ್ಮಿಕ ಎಂಬ ವಿಷಯದಲ್ಲಿ ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿಯವರು ವಿಷಯ ಮಂಡಿಸಿ ಮಾತನಾಡಿದರು. ಮದನೀಸ್ ಅಸೋಸಿಯೇಶನ್ ಕೇರಳ ರಾಜ್ಯಾಧ್ಯಕ್ಷ ಸಯ್ಯಿದುಸ್ಸಾದಾತ್ ಆದೂರು ಸೈಯದ್ ಅಶ್ರಫ್ ತಂಙಳ್, ಖುರ್ರತುಸ್ಸಾದಾತ್ ಸೈಯದ್ ಫಝಲ್ ಕೋಯಮ್ಮ ತಂಙಳ್ ಆಶಂಸಾ ಭಾಷಣ ಮಾಡಿದರು.
ಮದನೀಸ್ ಅಸೋಸಿಯೇಶನ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಸ್ವಾಗತಿಸಿದರು. ಮದನೀಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಂಡಾಡಿ ಅಬ್ಬಾಸ್ ಮದನಿ ವಂದಿಸಿದರು. ಹಂಝ ಮದನಿ ಗುರುವಾಯನಕೆರೆ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಸಅದಿಯ್ಯ ಪ್ರಿನ್ಸಿಪಾಲ್ ಮಾಣಿಕ್ಕೂತ್ ಅಬ್ದುಲ್ಲಾ ಮುಸ್ಲಿಯಾರ್, ಮದನೀಸ್ ಅಸೋಸಿಯೇಶನ್ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ತಲಕ್ಕಿ ಮೂಸಲ್ ಮದನಿ, ತಮಿಳುನಾಡು ರಾಜ್ಯಾಧ್ಯಕ್ಷ ಸಿ.ಕೆ.ಕುಂಞ್ಞಾಲನ್ ಮದನಿ, ಹೈದರ್ ಮದನಿ ಕರಾಯ, ಜೆಪ್ಪು ಮುದರ್ರಿಸ್ ಮುಹಮ್ಮದ್ ಮದನಿ, ಕಾಸಿಂ ಮದನಿ ಕರಾಯ, ಸೈಯದ್ ಬದ್ರುದ್ದೀನ್ ತಂಙಳ್, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಆಲಪ್ಪುಝ ಅಬ್ದುರ್ರಶೀದ್ ಮದನಿ, ಪಾತೂರು ಅಬ್ದುಲ್ಲಾ ಮದನಿ, ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಮರ್ಕಝ್ ಮುದರ್ರಿಸ್ ಇಸ್ಮಾಯಿಲ್ ಮದನಿ, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಪಿ.ಕೆ.ಮುಹಮ್ಮದ್ ಮದನಿ ಅಳಕೆ, ಯು.ಕೆ.ಅಬೂಬಕರ್ ಮದನಿ ಮುದುಂಗಾರುಕಟ್ಟೆ, ಕೇಂದ್ರ ಸಮಿತಿ ಕಾರ್ಯದರ್ಶಿ ಆರ್.ಕೆ.ಮದನಿ ಅಮ್ಮೆಂಬಳ, ರಾಜ್ಯ ಕೋಶಾಧಿಕಾರಿ ಇಸ್ಮಾಯಿಲ್ ಬುಖಾರಿ ಮದನಿ ನೂಜಿ, ಉಡುಪಿ ಜಿಲ್ಲಾಧ್ಯಕ್ಷ ಸೈಯದ್ ಕರ್ಕಿ ತಂಙಳ್, ದ.ಕ.ಈಸ್ಟ್ ಜಿಲ್ಲಾಧ್ಯಕ್ಷ ಮುಹಮ್ಮದ್ ಶರೀಫ್ ಮದನಿ ಪೆರುವಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ ಮಾಡಾವು, ಶಿವಮೊಗ್ಗ - ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸಿ.ಎಸ್. ಹನೀಫ್ ಮದನಿ, ಕಾಸರಗೋಡ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆರುವತ್ತೂರು ಯೂಸುಫ್ ಮದನಿ, ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ಶರೀಫ್ ಮದನಿ ಕರ್ಪಾಡಿ, ದ.ಕ.ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಂ.ಮುಹ್ಯಿದ್ದೀನ್ ಮದನಿ ಕಟ್ಟತ್ತಲ, ಬಂಟ್ವಾಳ ತಾಲೂಕು ಅಧ್ಯಕ್ಷ ಬೈರಿಕಟ್ಟೆ ಸಲೀಂ ಮದನಿ, ಪ್ರಧಾನ ಕಾರ್ಯದರ್ಶಿ ಅಕ್ಬರ್ ಮದನಿ, ಮಂಗಳೂರು ತಾಲೂಕು ಅಧ್ಯಕ್ಷ ಮುಫತ್ತಿಶ್ ಸಿದ್ದೀಕ್ ಮದನಿ, ಪ್ರಧಾನ ಕಾರ್ಯದರ್ಶಿ ಶಾಫಿ ಮದನಿ, ಕೊಡಗು ಜಿಲ್ಲಾಧ್ಯಕ್ಷ ಮಡಿಕೇರಿ ಅಬ್ದುಲ್ ಹಮೀದ್ ಮದನಿ, ಸಾಮಣಿಗೆ ಮುಹಮ್ಮದ್ ಮದನಿ, ಹಸೈನಾರ್ ಮದನಿ ಕಾಙಂಗಾಡ್, ಇರ್ಶಾದ್ ಮದನಿ ನೀಲಗಿರಿ ಮತ್ತಿತರರು ಉಪಸ್ಥಿತರಿದ್ದರು.







