ಮಡಿಕೇರಿ: ಸೂಟ್ ಕೇಸ್ ನಲ್ಲಿ ಮಹಿಳೆಯ ಕೊಳೆತ ಮೃತದೇಹ ಪತ್ತೆ
![ಮಡಿಕೇರಿ: ಸೂಟ್ ಕೇಸ್ ನಲ್ಲಿ ಮಹಿಳೆಯ ಕೊಳೆತ ಮೃತದೇಹ ಪತ್ತೆ ಮಡಿಕೇರಿ: ಸೂಟ್ ಕೇಸ್ ನಲ್ಲಿ ಮಹಿಳೆಯ ಕೊಳೆತ ಮೃತದೇಹ ಪತ್ತೆ](https://www.varthabharati.in/h-upload/2023/09/18/1192532-.webp)
ಮಡಿಕೇರಿ ಸೆ.18 : ಕೊಡಗಿನ ಗಡಿಭಾಗ ಪೆರುಂಬಾಡಿ ಚೆಕ್ ಪೋಸ್ಟ್ ವ್ಯಾಪ್ತಿಯ ಕಾಡು ಪ್ರದೇಶದಲ್ಲಿ ಸೂಟ್ ಕೇಸ್ ವೊಂದರಲ್ಲಿ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಗಿರುವುದು ವರದಿಯಾಗಿದೆ.
ಚೆಕ್ ಪೋಸ್ಟ್ ನಿಂದ 3 ಕಿ.ಮೀ ದೂರದಲ್ಲಿ ವಾಟೆಕೊಲ್ಲಿ ಎಂಬಲ್ಲಿ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Next Story