ಡಿ.ಕೆ.ಶಿವಕುಮಾರ್ ಆರೆಸ್ಸೆಸ್ ಗೀತೆ ಹೇಳಬಾರದಿತ್ತು : ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು, ಆ.27 : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸೌಧದಲ್ಲಿ ಆರೆಸ್ಸೆಸ್ ಗೀತೆ ಹೇಳಬಾರದಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಹಾಗೆ ಹೇಳಬಾರದಿತ್ತು, ಆದರೂ ಹೇಳಿದ ಮೇಲೆ ಅವರು ಕ್ಷಮೆ ಕೇಳಿದ್ದಾರೆ. ಈಗ ಮುಗಿದಿರುವ ವಿಚಾರದ ಬಗ್ಗೆ ಮತ್ತೆ ಮಾತನಾಡಲು ಹೋಗುವುದಿಲ್ಲ ಎಂದರು.
ಮುಂದುವರೆದು ಧರ್ಮಸ್ಥಳ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ಖರ್ಗೆ ಅವರು, ಇದು ಮುಗಿದ ವಿಚಾರ ಎಂದು ಹೇಳಿದರು.
Next Story





