ನಿಸರ್ಗಕ್ಕೆ ಅನುಕೂಲವಾಗುವಂತೆ ಚೆಕ್‍ಡ್ಯಾಮ್‍ಗಳ ನಿರ್ಮಾಣ : ಭೋಸರಾಜು

ಬೆಂಗಳೂರು : ಎಲ್ಲೆಲ್ಲಿ ನೀರು ಪೋಲಾಗುತ್ತಿದೆಯೋ ಅಲ್ಲಿ ನಿಸರ್ಗಕ್ಕೆ ಅನುಕೂಲವಾಗುವಂತೆ ಚೆಕ್‍ಡ್ಯಾಮ್‍ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.
ಗುರುವಾರ ವಿಧಾನಪರಿಷತ್ತಿನ ಕಲಾಪದ ವೇಳೆಯಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಣ್ಣ ನಿರಾವರಿ ಇಲಾಖೆಯಿಂದ ಕೃಷಿ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಕೆರೆಗಳು, ಅಣೆಕಟ್ಟು, ಪಿಕಪ್, ಬಂದಾರ, ಚೆಕ್ ಡ್ಯಾಮ್, ಕಿಂಡಿ ಅಣೆಕಟ್ಟು, ಏತ ನೀರಾವರಿ ಯೋಜನೆ, ಕೆರೆಗಳಿಗೆ ನಿರು ತುಂಬಿಸುವ ಯೋಜನೆಗಳನ್ನು ಕರಾವಳಿ ಪ್ರದೇಶಗಳಲ್ಲಿ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುವುದನ್ನು ತಡೆಗಟ್ಟಲು ಕ್ಷಾರ ಭೂಮಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಯೊಜನೆಗಳು ಅಂತರ್ಜಲ ಅಭಿವೃದ್ಧಿಗೆ ಪರೋಕ್ಷವಾಗಿ ಸಹಕಾರಿಯಾಗಿವೆ ಎಂದರು.
ಹಿಂದಿನ 2 ವರ್ಷಗಳಲ್ಲಿ 763 ಚೆಕ್ ಡ್ಯಾಮ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಮತ್ತು ಈ ಚೆಕ್ ಡ್ಯಾಮ್‍ಗಳಲ್ಲಿ 2424.10 ಎಂ.ಸಿ.ಎಫ್.ಟೊ ನೀರನ್ನು ಸಂಗ್ರಹಿಸಲಾಗುತ್ತಿದೆ ಎಂದು ಎನ್.ಎಸ್.ಭೋಸರಾಜು ತಿಳಿಸಿದರು.





