"ರಾಜ್ಯ ವಕ್ಫ್ ನಿಯಮಗಳ ಪರಿಶೋಧನೆ" : ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ

ಯು.ಟಿ.ಖಾದರ್
ಬೆಂಗಳೂರು : ಕೇಂದ್ರ ಸರಕಾರದ ಉಮೀದ್( UMEED) ಕಾಯ್ದೆ 2025ರ ಕಲಂ 109ರ ಅಡಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ನಿಯಮಗಳನ್ನು ಜಾರಿಗೊಳಿಸಲು ರೂಪಿಸಲಾಗಿರುವ ಕರಡು ನಿಯಮಗಳನ್ನು ಪರಿಶೋಧಿಸಿ ಅಂತಿಮಗೊಳಿಸಲು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಸಮಿತಿಯ ಉಪಾಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ವಕ್ಫ್ ಮಂಡಳಿ ಅಧ್ಯಕ್ಷ ಡಾ.ಸೈಯದ್ ಮುಹಮ್ಮದ್ ಅಲಿ ಅಲ್-ಹುಸೈನಿ, ಸದಸ್ಯರಾಗಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಕಾರ್ಯದರ್ಶಿ, ಬೆಂಗಳೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾ ಉದ್ದೀನ್ ಜೆ.ಗದ್ಯಾಳ್, ಹೆಚ್ಚುವರಿ ಅಡ್ವೊಕೇಟ್ ಜನರಲ್ ಶಾಹುಲ್ ಹಮೀದ್, ನಿವೃತ್ತ ನ್ಯಾ.ಮುಸ್ತಫಾ ಹುಸೇನ್, ನ್ಯಾ. ಪಠಾಣ್, ನಿವೃತ್ತ ಐಎಎಸ್ ಅಧಿಕಾರಿ ಅನ್ವರ್ ಪಾಷಾ, ನಿವೃತ್ತ ಕೆಎಎಸ್ ಅಧಿಕಾರಿ ಎಂ.ಎ.ಖಾಲಿದ್, ರಾಜ್ಯ ವಕ್ಫ್ ಮಂಡಳಿ ಸದಸ್ಯ ಆರ್. ಅಬ್ದುಲ್ ರಿಯಾಝ್ ಖಾನ್, ಮಾಜಿ ಸದಸ್ಯ ಆಸೀಫ್ ಅಲಿ ಶೇಖ್ ಹುಸೇನ್, ಹೈಕೋರ್ಟ್ ಹಿರಿಯ ವಕೀಲೆ ಅನುರಾಧಾ, ವಕೀಲರಾದ ಮುಹಮ್ಮದ್ ಶಾಮಿಲ್, ಸನೋಬರ್ ಫಾತೀಮಾ ಸಿ. ಅವರನ್ನು ನೇಮಕ ಮಾಡಲಾಗಿದೆ.
ಸದಸ್ಯ ಕಾರ್ಯದರ್ಶಿಯಾಗಿ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನು ನೇಮಕ ಮಾಡಲಾಗಿದೆ.




