ವಕ್ಫ್ ತಿದ್ದುಪಡಿ ವಾದ ಹಿನ್ನೆಲೆ: ಹಿರಿಯ ವಕೀಲರೊಂದಿಗೆ ಸಚಿವ ಝಮೀರ್ ಅಹ್ಮದ್ ಚರ್ಚೆ

ಹೊಸದಿಲ್ಲಿ: ವಕ್ಫ್(ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಕುರಿತು ಸುಪ್ರೀಂಕೋರ್ಟಿನಲ್ಲಿ ವಾದ ನಡೆಯುತ್ತಿರುವ ಹಿನ್ನೆಲೆ ಹಿರಿಯ ವಕೀಲರಾದ ಕಪಿಲ್ ಸಿಬಲ್, ಸಲ್ಮಾನ್ ಖುರ್ಶಿದ್ ಅವರನ್ನು ಸಚಿವ ಝಮೀರ್ ಅಹ್ಮದ್ ಖಾನ್ ಭೇಟಿ ಮಾಡಿ ಚರ್ಚಿಸಿದ್ದಾರೆ.
ಶನಿವಾರ ಹೊಸದಿಲ್ಲಿಯಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಇಸ್ಮಾಯಿಲ್ ಝಬಿವುಲ್ಲಾ ಅವರೊಂದಿಗೆ ಹಿರಿಯ ವಕೀಲರೊಂದಿಗೆ ಭೇಟಿ ಮಾಡಿ ಮುಂದಿನ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಮಂಡಳಿ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಬಾμÁ, ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟ್‍ಗಾರ್, ವಕೀಲರಾದ ಶೀತಲ್ ಸೋನು ಸೇರಿದಂತೆ ಪ್ರಮುಖರಿದ್ದರು.
Next Story





