ರನ್ಯಾರಾವ್ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಿಸಲಿ: ಬಿಜೆಪಿ ವಿರುದ್ಧವೇ ಆಕ್ರೋಶ ಹೊರಹಾಕಿದ ಶಾಸಕ ಸೋಮಶೇಖರ್

ಎಸ್.ಟಿ.ಸೋಮಶೇಖರ್
ಬೆಂಗಳೂರು: ‘ಬಿಜೆಪಿ ಮುಖಂಡರು ಸುಖಾ ಸುಮ್ಮನೆ, ಊಹಾಪೋಹಗಳನ್ನು ಆಧರಿಸಿ ಆರೋಪ ಮಾಡುವುದನ್ನು ಬಿಟ್ಟು ಕೇಂದ್ರ ಸರಕಾರದೊಂದಿಗೆ ಮಾತನಾಡಿ ನಟಿ ರನ್ಯಾರಾವ್ ಪ್ರಕರಣ ಸಂಬಂಧ ತನಿಖೆ ಮಾಡಿಸಲಿ’ ಎಂದು ಬಿಜೆಪಿಯ ಶಾಸಕ ಎಸ್.ಟಿ.ಸೋಮಶೇಖರ್ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಟಿ ರನ್ಯಾ ರಾವ್ ಚಿನ್ನವನ್ನು ಕಳ್ಳ ಸಾಗಾಣೆ ಪ್ರಕರಣದಲ್ಲಿ ಕಾಂಗ್ರೆಸ್ನ ಪ್ರಭಾವಿ ರಾಜಕಾರಣಿಗಳಿದ್ದಾರೆಂದು ಆರೋಪ ಮಾಡುವುದು ಸರಿಯಲ್ಲ. ಈಡಿ, ಸಿಬಿಐ ತನಿಖಾ ಸಂಸ್ಥೆಗಳು ಯಾರ ಅಧೀನದಲ್ಲಿವೇ? ಎಂದು ಪ್ರಶ್ನಿಸಿದರು.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಶರವೇಗದಲ್ಲಿ ಕೆಐಎಡಿಬಿಯ 12 ಎಕರೆ ಜಮೀನು ಪಡೆಯುವ ಆರು ತಿಂಗಳ ಮುನ್ನ ತನ್ನ ಕಂಪೆನಿ ಬ್ಯಾಂಕ್ ಖಾತೆಗೆ 10ಲಕ್ಷ ರೂ.ಸಂದಾಯ ಮಾಡಿಸಿಕೊಂಡಿದ್ದ ವಿಚಾರ ಬಯಲಿಗೆ ಬಂದಿದೆ. ಇದರ ಹಿಂದೆ ಬಿಜೆಪಿ ಮುಖಂಡರ ಕೈವಾಡ ಇಲ್ಲವೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
Next Story





