ನಂದಿನಿ ತುಪ್ಪದ ದರ ಪ್ರತಿ ಲೀಟರ್‌ಗೆ 90 ರೂ. ಏರಿಕೆ; ಬೆಣ್ಣೆಯ ದರದಲ್ಲೂ ಹೆಚ್ಚಳ

ಬೆಂಗಳೂರು : ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿ(ಕೆಎಂಎಫ್) ನಂದಿನಿ ತುಪ್ಪ ಹಾಗೂ ಬೆಣ್ಣೆಯ ದರ ಪರಿಷ್ಕರಣೆ ಮಾಡಿದ್ದು, ತುಪ್ಪದ ದರವನ್ನು ಪ್ರತಿ ಲೀಟರ್‌ಗೆ 90 ರೂ., ಬೆಣ್ಣೆಯ ದರವನ್ನು ಪ್ರತಿ ಕೆ.ಜಿ.ಗೆ 26 ರೂ.ಗಳನ್ನು ಏರಿಕೆ ಮಾಡಿದೆ. ಈ ಪರಿಷ್ಕೃತ ದರ ಇಂದಿನಿಂದಲೇ(ನ.5) ಜಾರಿಯಾಗಲಿದೆ.
ಜಿಎಸ್‍ಟಿ ದರ ಇಳಿಕೆಯಾದಾಗ ನಂದಿನಿ ತುಪ್ಪದ ಬೆಲೆ ಲೀಟರ್‌ಗೆ 40 ರೂ. ಇಳಿಕೆ ಮಾಡಿತ್ತು. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತುಪ್ಪ ಹಾಗೂ ಬೆಣ್ಣೆಗೆ ಬೇಡಿಕೆ ಹೆಚ್ಚಾಗಿ ದರದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ದರ ಏರಿಕೆ ಮಾಡಲಾಗಿದೆ.
ಒಂದು ಲೀಟರ್ ನಂದಿನಿ ತುಪ್ಪಕ್ಕೆ ಈಗ 700 ರೂಪಾಯಿ ದರ ನಿಗದಿ ಮಾಡಲಾಗಿದೆ. ಈ ಮೊದಲು 610 ರೂ.ಗೆ ಒಂದು ಲೀಟರ್ ತುಪ್ಪ ಮಾರಾಟ ಮಾಡಲಾಗುತ್ತಿತ್ತು. ಒಂದು ಕೆ.ಜಿ. ಬೆಣ್ಣೆಯ ಬೆಲೆ ಈಗ 570 ರೂಪಾಯಿ ದರ ನಿಗದಿ ಮಾಡಲಾಗಿದೆ. ಈ ಮೊದಲು 544 ರೂ.ಗಳಿಗೆ ಒಂದು ಕೆ.ಜಿ. ಬೆಣ್ಣೆ ಮಾರಾಟ ಮಾಡಲಾಗುತ್ತಿತ್ತು ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





