ನಂದಿನಿ ಹಾಲಿನ ಉತ್ಪನ್ನಗಳ ದರ ಪರಿಷ್ಕರಣೆ

ಸಾಂದರ್ಭಿಕ ಚಿತ್ರ | PC : kmfnandini
ಬೆಂಗಳೂರು, ಸೆ.20 : ಕೇಂದ್ರ ಸರಕಾರವು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಇಳಿಕೆಯಿಂದಾಗಿ ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾ ಮಂಡಳ ನಿಯಮಿತ(ಕೆಎಂಎಫ್) ಹಾಲಿನ ಉತ್ಪನ್ನಗಳ ಮಾರಾಟ ದರ ಪರಿಷ್ಕರಣೆ ಮಾಡಿದ್ದು, ಸೆ.22ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಕೇಂದ್ರ ಸರಕಾರವು ಸಾರ್ವಜನಿಕರ ದೈನಂದಿನ ಬಳಕೆಯ ಆಹಾರ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಇಳಿಕೆ ಮಾಡಿದ್ದು ಸೆ.22ರಿಂದ ಕಡ್ಡಾಯವಾಗಿ ಎಲ್ಲ ಆಹಾರ ಉತ್ಪನ್ನಗಳ ತಯಾರಿಕಾ ಮತ್ತು ಮಾರಾಟ ಸಂಸ್ಥೆಗಳು ಜಾರಿಗೊಳಿಸುವಂತೆ ತಿಳಿಸಲಾಗಿದೆ. ಅದರಂತೆ ಕೆಎಂಎಫ್ ಸಂಸ್ಥೆಯ ನಂದಿನಿ ಉತ್ಪನ್ನಗಳ ಮಾರಾಟ ದರ ಪರಿಷ್ಕರಣೆ ಮಾಡಲಾಗಿದೆ.
ನಂದಿನಿ ತುಪ್ಪ, ಬೆಣ್ಣೆ, ಚೀಸ್, ಕುರುಕು ತಿಂಡಿಗಳ ಮೇಲಿನ ಜಿಎಸ್ಟಿ ಶೇ.12ರಿಂದ ಶೇ.5ಕ್ಕೆ, ನಂದಿನಿ ಕುಕ್ಕಿಸ್, ಚಾಕೋಲೇಟ್ಸ್, ಐಸ್ಕ್ರೀಂ, ಇನ್ಸ್ ಟಾಂಟ್ ಮಿಕ್ಸ್ ಮತ್ತು ಪ್ಯಾಕ್ಸ್ ನೀರಿನ ಮೇಲಿನ ಜಿಎಸ್ಟಿ ಶೇ.18 ರಿಂದ ಶೇ.5ಕ್ಕೆ, ನಂದಿನಿ ಪನೀರ್ ಮತ್ತು ಯುಎಚ್ಟಿ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್ಟಿ ಶೇ.5ರಿಂದ ಶೇ.0.ಕ್ಕೆ ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಸೆ.22ರಿಂದ ಅನ್ವಯವಾಗಲಿವೆ ಎಂದು ಪ್ರಕಟನೆ ತಿಳಿಸಿದೆ.
ಪ್ರಮುಖ ಉತ್ಪನ್ನಗಳ ದರ: 1000 ಮಿಲಿ ತುಪ್ಪ 650 ರೂ.ದಿಂದ 610ರೂ.ಗೆ ಇಳಿಕೆ, 500ಗ್ರಾಂ ಉಪ್ಪು ರಹಿತ ಬೆಣ್ಣೆ 305 ರೂ.ದಿಂದ 286ರೂ., 1000 ಗ್ರಾಂ ಪನೀರ್ 425 ರೂ.ದಿಂದ 408 ರೂ., 1000 ಮಿಲಿ ಗುಡ್ಲೈಫ್ ಹಾಲು 70ರೂ.ದಿಂದ 68 ರೂ.ಗೆ ಇಳಿಕೆ, 1000 ಮಿಲಿ ಐಸ್ಕ್ರೀಮ್ ಟಬ್ 200ರೂ.ದಿಂದ 178 ರೂ., 5000 ಮಿಲಿ ಫ್ಯಾಮಿಲಿ ಪ್ಯಾಕ್ ಐಸ್ಕ್ರೀಮ್ 645ರೂ.ದಿಂದ, 574 ರೂ.ಗೆ ಇಳಿಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.







