ಎನ್ಸಿ ಕ್ಲಾಸಿಕ್ ಟೂರ್ನಿ ಗೆದ್ದ ನೀರಜ್ ಚೋಪ್ರಾ: ಹರ್ಷ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
"ನೀರಜ್ ಚೋಪ್ರಾ ಚಾಂಪಿಯನ್ ಆಗಿ ಹೊರಹೊಮ್ಮಿದ ಕ್ಷಣಗಳಿಗೆ ಸಾಕ್ಷಿಯಾದದ್ದು ಖುಷಿ ಕೊಟ್ಟಿತು"

Photo: X/@siddaramaiah
ಬೆಂಗಳೂರು: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಭಾರತದಲ್ಲಿ ನಡೆದ ಮೊತ್ತ ಮೊದಲ ಅಂತರ್ರಾಷ್ಟ್ರೀಯ ಜಾವೆಲಿನ್ ಸ್ಪರ್ಧಾವಳಿ ಎನ್ಸಿ ಕ್ಲಾಸಿಕ್ನಲ್ಲಿ ಮೊದಲ ಸ್ಥಾನ ಪಡೆದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, " ಭಾರತದ ಕ್ರೀಡಾ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿರುವ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ "ನೀರಜ್ ಚೋಪ್ರಾ ಕ್ಲಾಸಿಕ್- 2025" ಜಾವೆಲಿನ್ ಎಸೆತ ಕ್ರೀಡಾಕೂಟದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅವರ ಜೊತೆಯಾಗಿ ಪಾಲ್ಗೊಂಡು, ವಿಶ್ವಶ್ರೇಷ್ಠ ಜಾವೆಲಿನ್ ಎಸೆತಗಾರರ ಕ್ರೀಡಾ ಪ್ರದರ್ಶನವನ್ನು ವೀಕ್ಷಿಸಿದೆ" ಎಂದು ಹೇಳಿದ್ದಾರೆ.
"2 ಬಾರಿ ಒಲಿಂಪಿಕ್ ಪದಕ ವಿಜೇತ, ಹಾಲಿ ವಿಶ್ವಚಾಂಪಿಯನ್, ವಿಶ್ವನಂ. 1 ಜಾವಲಿನ್ ಪಟು ನೀರಜ್ ಚೋಪ್ರ ತಮ್ಮ ಹೆಸರಿನಲ್ಲಿ ಆಯೋಜಿಸಿದ್ದ ಈ ಅಂತಾರಾಷ್ಟ್ರೀಯ ಜಾವಲಿನ್ ಪಂದ್ಯಾಕೂಟದಲ್ಲಿ ಸ್ವತಃ ಅವರೇ ಚಾಂಪಿಯನ್ ಆಗಿ ಹೊರಹೊಮ್ಮಿದ ಕ್ಷಣಗಳಿಗೆ ನಾನು ಸಾಕ್ಷಿಯಾದದ್ದು ಹೆಚ್ಚು ಖುಷಿ ಕೊಟ್ಟಿತು. ನೀರಜ್ ಚೋಪ್ರ ಅವರಿಗೆ ಪದಕ ನೀಡಿ ಗೌರವಿಸಿ, ಮುಂದಿನ ಒಲಿಂಪಿಕ್ನಲ್ಲಿ ಮತ್ತೆ ಭಾರತದ ಕೀರ್ತಿಪತಾಕೆ ಹಾರಲೆಂದು ಶುಭ ಹಾರೈಸಿದೆ" ಎಂದು ಸಿಎಂ ಪೋಸ್ಟ್ ಮಾಡಿದ್ದಾರೆ.
ಭಾರತದ ಕ್ರೀಡಾ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿರುವ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ "ನೀರಜ್ ಚೋಪ್ರಾ ಕ್ಲಾಸಿಕ್- 2025" ಜಾವೆಲಿನ್ ಎಸೆತ ಕ್ರೀಡಾಕೂಟದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅವರ ಜೊತೆಯಾಗಿ ಪಾಲ್ಗೊಂಡು, ವಿಶ್ವಶ್ರೇಷ್ಠ ಜಾವೆಲಿನ್ ಎಸೆತಗಾರರ ಕ್ರೀಡಾ… pic.twitter.com/5LzBRzmDfC
— Siddaramaiah (@siddaramaiah) July 5, 2025