ಸಿ ಎಂ ಸಿದ್ದರಾಮಯ್ಯ , ಬಾಲಿವುಡ್ ನಟ ಅಮೀರ್ ಖಾನ್ ಮುಖಾಮುಖಿ ಭೇಟಿ

ಹೊಸದಿಲ್ಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಲಿವುಡ್ ನಟ-ನಿರ್ದೇಶಕ ಅಮೀರ್ ಖಾನ್ ಅವರ ಮುಖಾಮುಖಿಯಾಯಿತು.
ಪರಸ್ಪರ ಹಸ್ತಲಾಘವದ ಬಳಿಕ ಕುಶಲೋಪರಿ ವಿಚಾರಿಸಿ ಕೆಲ ಸಮಯ ಮಾತುಕತೆ ನಡೆಸಿದರು.
ಆಮಿರ್ ಖಾನ್ ನಿರ್ಮಿಸಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಆಮಿರ್ ಖಾನ್, ಸಿದ್ದರಾಮಯ್ಯ ಅವರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಆಮಿರ್ ಖಾನ್ ಅವರ ಸಿನಿಮಾಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶುಭ ಹಾರೈಸಿದರು.
Next Story







