ಸಂತ್ರಾಗಾಚಿ-ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸೇವಾ ಅವಧಿ ವಿಸ್ತರಣೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಸಂತ್ರಾಗಾಚಿ ಮತ್ತು ಯಶವಂತಪುರ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲುಗಳ (02863/02864) ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಆಗ್ನೇಯ ರೈಲ್ವೆಯು ತಿಳಿಸಿದೆ.
ಅದರಂತೆ, ರೈಲು ಸಂಖ್ಯೆ 02863 ಸಂತ್ರಾಗಾಚಿ-ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು, ಈ ಹಿಂದೆ ಜೂ.26 ರವರೆಗೆ ಸಂಚರಿಸುವುದಾಗಿ ತಿಳಿಸಲಾಗಿತ್ತು, ಈಗ ಜು.10 ರಿಂದ ಆ.28ರವರೆಗೆ ಪ್ರತಿ ಗುರುವಾರ ಸಂಚರಿಸಲಿದೆ.
ಅದೇ ರೀತಿ, ರೈಲು ಸಂಖ್ಯೆ 02864 ಯಶವಂತಪುರ-ಸಂತ್ರಾಗಾಚಿ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು, ಜೂ.28 ರವರೆಗೆ ಸಂಚರಿಸುವುದಾಗಿ ನಿಗದಿಪಡಿಸಲಾಗಿತ್ತು, ಈಗ ಇದು ಜು.12 ರಿಂದ ಆ.30 ರವರೆಗೆ ಪ್ರತಿ ಶನಿವಾರ ಸಂಚರಿಸಲಿದೆ. ಈ ರೈಲುಗಳು ತಮ್ಮ ಅಸ್ತಿತ್ವದಲ್ಲಿರುವ ವೇಳಾಪಟ್ಟಿ, ನಿಲುಗಡೆಗಳು ಮತ್ತು ಬೋಗಿ ಸಂಯೋಜನೆಯೊಂದಿಗೆ ಸಂಚಾರವನ್ನು ಮುಂದುವರಿಸುತ್ತವೆ.
ನರಸಾಪುರ-ಅರಸೀಕೆರೆ ನಡುವಿನ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ರದ್ದು: ನರಸಾಪುರ ಮತ್ತು ಅರಸೀಕೆರೆ ನಡುವೆ ಸಂಚರಿಸಬೇಕಿದ್ದ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಪ್ರಯಾಣಿಕರ ಕೊರತೆಯಿಂದಾಗಿ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.
ರೈಲು ಸಂಖ್ಯೆ 07201 ನರಸಾಪುರ-ಅರಸೀಕೆರೆ ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಜು.13 ರಿಂದ ಆ.31ರವರೆಗೆ ಪ್ರತಿ ರವಿವಾರ ಸಂಚರಿಸಬೇಕಿತ್ತು. ಆದರೆ, ಇದನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 07202 ಅರಸೀಕೆರೆ-ನರಸಾಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ವಿಶೇಷ ರೈಲು ಜು.14 ರಿಂದ ಸೆ.1ರವರೆಗೆ ಪ್ರತಿ ಸೋಮವಾರ ಸಂಚರಿಸಬೇಕಿತ್ತು. ಈ ರೈಲನ್ನೂ ಸಹ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.







