Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. 2G, ಕಲ್ಲಿದ್ದಲು ಹಗರಣಕ್ಕಿಂತ ದೊಡ್ಡದು...

2G, ಕಲ್ಲಿದ್ದಲು ಹಗರಣಕ್ಕಿಂತ ದೊಡ್ಡದು ನೈಸ್ ಹಗರಣ: ಎಚ್.ಡಿ. ಕುಮಾರಸ್ವಾಮಿ ಆರೋಪ

"ವಿಧಾನಸೌಧದ ಮೆಟ್ಟಿಲ ಮೇಲೆ ಚರ್ಚೆಗೆ ಸಿಎಂ ಬರಲಿ"

ವಾರ್ತಾಭಾರತಿವಾರ್ತಾಭಾರತಿ29 Sept 2026 9:06 PM IST
share
2G, ಕಲ್ಲಿದ್ದಲು ಹಗರಣಕ್ಕಿಂತ ದೊಡ್ಡದು ನೈಸ್ ಹಗರಣ: ಎಚ್.ಡಿ. ಕುಮಾರಸ್ವಾಮಿ ಆರೋಪ

ಬೆಂಗಳೂರು: 2ಜಿ ಹಗರಣಕ್ಕಿಂತಲೂ ನೈಸ್ ಯೋಜನೆ ಹಗರಣ ದೊಡ್ಡದಾಗಿದ್ದು, ಇದರ ನೆಪದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಯೋಜನೆಯ ಗುತ್ತಿಗೆದಾರ ಅಶೋಕ್ ಖೇಣಿ ಅಪಾರ ಪ್ರಮಾಣದ ಭೂಮಿಯನ್ನು ಲಪಟಾಯಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಈ ಸಂಬಂಧ ವಿಧಾನಸೌಧದ ಮೆಟ್ಟಿಲ ಮೇಲೆ ಚರ್ಚೆಗೆ ಬರಲಿ ಎಂದು ಸಿಎಂಗೆ ಪಂಥಾಹ್ವಾನ ನೀಡಿದ್ದಾರೆ.

ಮಂಗಳವಾರ ಖಾಸಗಿ ಹೋಟೆಲ್‍ನಲ್ಲಿ ‘ನಥಿಂಗ್ ನೈಸ್’ ಶಿರ್ಷಿಕೆಯಡಿ ನಡೆದ ಸುದ್ದಿಗೋಷ್ಠಿಯಲ್ಲಿ ನೈಸ್ ಹಗರಣ ಸಂಬಂಧ ದಾಖಲೆ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಡಿಕೆ (ಡಿ.ಕೆ. ಶಿವಕುಮಾರ್) ಮತ್ತು ಎಕೆ (ಅಶೋಕ್ ಖೇಣಿ) ಸೇರಿ ಯೋಜನೆಗಾಗಿ ಮುಗ್ಧ ಜನರಿಂದ ಸ್ವಾಧೀನ ಪಡೆಸಿಕೊಳ್ಳಲಾಗಿದ್ದ ಭೂಮಿಯನ್ನು ಅಪಾರ ಪ್ರಮಾಣದಲ್ಲಿ ಲೂಟಿ ಹೊಡೆದಿದ್ದಾರೆ. ಅದರಲ್ಲಿಯೂ ಮುಖ್ಯಮಂತ್ರಿ ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿಯೇ ನೈಸ್ ಭೂಮಿಯನ್ನು ಅಕ್ರಮವಾಗಿ ಕೊಳ್ಳೆ ಹೊಡೆದಿದ್ದಾರೆ. ನೈತಿಕತೆ ಇದ್ದಲ್ಲಿ ಶಿವಕುಮಾರ್ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಈ ಹಗರಣ ಸಂಬಂಧ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ಬಂಧಿಸಬೇಕು. ಆತನ ಪಾಸ್‍ಪೋರ್ಟ್ ಸಹ ಜಪ್ತಿ ಮಾಡಬೇಕು. ನೈಸ್ ಯೋಜನೆ ಎಚ್.ಡಿ.ದೇವೇಗೌಡ ಅವರ ಕೂಸು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ಸ್ವತಃ ಇದರಲ್ಲಿ ಅವರೇ ಶಾಮೀಲಾಗಿರುವ ಈ ಹಗರಣವು 2ಜಿ ಹಗರಣ, ಕಲ್ಲಿದ್ದಲು ಹಗರಣಕ್ಕಿಂತಲೂ ದೊಡ್ಡದು ಎಂದು ಅವರು ಆಪಾದಿಸಿದರು.

ನೈಸ್ ಯೋಜನೆ ಹೆಸರಲ್ಲಿ ರೈತರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಗುಲಾಮಗಿರಿ ವ್ಯವಸ್ಥೆಯಲ್ಲಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ ಎನ್ನುವಂತೆ ಆಗಿದೆ. ಯಾವನೋ ಒಬ್ಬನ ಗುತ್ತಿಗೆದಾರನ ಮರ್ಜಿಯಲ್ಲಿ ಸರಕಾರ ಕೆಲಸ ಮಾಡುತ್ತಿದೆ ಎಂದು ಅನಿಸುತ್ತಿದೆ. ಈ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯಾರು ಬಂದು ಚೌಕಾಸಿಗೆ ನಿಂತಿದ್ದಾರೆ ಎಂಬುದನ್ನು ಇಲ್ಲಿ ಹೇಳಲಾರೆ. ಆದರೆ ರೈತರಿಂದ ಅನ್ಯಾಯವಾಗಿ ಕಿತ್ತುಕೊಂಡ ಭೂಮಿಯನ್ನು ಮರಳಿ ಅವರಿಗೆ ಕೊಡುವವರೆಗೂ ಬಿಡುವುದಿಲ್ಲ. ಎಕರೆಗೆ ಒಂದು ನಿವೇಶನ ಪಡೆಯಲು ರೈತರೇನು ಭಿಕ್ಷುಕರೇ ಎಂದ ಅವರು, ವಿಧಾನಸೌಧದ ಮೆಟ್ಟಿಲ ಮೇಲೆಯೇ ಇದರ ಬಗ್ಗೆ ಚರ್ಚೆಗೆ ನಾನು ತಯಾರಿದ್ದೇನೆ. ಶಿವಕುಮಾರ್ ಅಷ್ಟೇ ಅಲ್ಲ, ಅವರ ಸಂಪುಟ ಸದಸ್ಯರು ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಬರಲಿ ಎಂದು ಸವಾಲು ಹಾಕಿದರು.

ದೇವೇಗೌಡರು ಮತ್ತು ಜೆ.ಎಚ್.ಪಟೇಲ್ ಅವರು ಇರುವ ತನಕ ಸರಿದಾರಿಯಲ್ಲಿ ನಡೆಯುತ್ತಿದ್ದ ಯೋಜನೆ, ಎಸ್.ಎಂ.ಕೃಷ್ಣ ಅವರು ಸಿಎಂ ಆದ ನಂತರ ದಾರಿ ತಪ್ಪಿತು. ಅವರ ಸರಕಾರದಲ್ಲಿ ನಗರಾಭಿವೃದ್ಧಿ ಮಂತ್ರಿ ಆಗಿದ್ದ ಡಿ.ಕೆ.ಶಿವಕುಮಾರ್ ಈ ಯೋಜನೆಗೆ ಪ್ರವೇಶ ಮಾಡಿದ ನಂತರ ಅಕ್ರಮಗಳು ಸರಣಿಯಾಗಿ ಆರಂಭವಾದವು. ಬಹಳ ದೀರ್ಘ ಕಾಲದಿಂದ ಚರ್ಚೆಯಲ್ಲಿದ್ದು, ತೀವ್ರ ವಿವಾದಕ್ಕೆ ತುತ್ತಾಗಿರುವ ನೈಸ್ ರಸ್ತೆ ಯೋಜನೆಯು ಕೆಲ ಖಾಸಗಿ ವ್ಯಕ್ತಿಗಳ ಲೂಟಿಗೆ ರಾಜಮಾರ್ಗವಾಗಿದೆ. ಯೋಜನೆಯ ಮೂಲ ಚೌಕಟ್ಟು ಒಪ್ಪಂದ ಬದಲಾಯಿಸಿ ಮನಸೋ ಇಚ್ಛೆ ಯೋಜನೆಯನ್ನು ವಿರೂಪಗೊಳಿಸಿದ್ದಾರೆ. ಆ ಮೂಲಕ ಬಡ ರೈತರ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಕೊಳ್ಳೆ ಹೊಡೆಯುವ ಉಪಾಯವನ್ನು ಕಂಡುಕೊಂಡಿದ್ದಾರೆ. ಅಲ್ಲದೆ ಅನೇಕ ಕೆರೆಗಳನ್ನು ನಾಶಪಡಿಸಿ ಪರಿಸರಕ್ಕೆ ಸರಿಪಡಿಸಲಾರದಷ್ಟು ಹಾನಿ ಉಂಟು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

1995ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಮಾಡಿಕೊಳ್ಳಲಾದ ಮೂಲ ಒಪ್ಪಂದ ಮತ್ತು ತದನಂತರ ರೂಪಿಸಲಾದ ಮೂಲ ಚೌಕಟ್ಟು ಒಪ್ಪಂದದ ಕುರಿತ ದಾಖಲೆ ಹಾಗೂ ಡಿಕೆ ಶಿವಕುಮಾರ್ ಅವರು ನೈಸ್ ಯೋಜನಾ ಪ್ರಾಧಿಕಾರದ (ಬಿಎಂಐಸಿಪಿಎ) ಅಧ್ಯಕ್ಷರಾದ ಮೇಲೆ ತಿರುಚಲಾದ ಔಟ್ ಲೈನ್ ಡೆವಲಪ್ಮೆಂಟ್ ಪ್ಲಾನ್ ದಾಖಲೆಯನ್ನು ಸಹ ಬಿಡುಗಡೆಗೊಳಿಸಿದ ಕುಮಾರಸ್ವಾಮಿ,. ಔಟ್ ಲೈನ್ ಡೆವಲಪ್ಮೆಂಟ್ ಯೋಜನೆಗೆ ಸ್ವತಃ ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿ ಮಾಡಿದ್ದಾರೆ ಎಂದು ದಾಖಲೆ ಪ್ರದರ್ಶನ ಮಾಡಿದರು.

ಆಸ್ತಿ ಏರಿಕೆ: ಹಾಲಿ ಮುಖ್ಯಮಂತ್ರಿ ಅವರದ್ದು 2003ರಲ್ಲಿ ಕೇವಲ 4 ಕೋಟಿ ಇದ್ದ ಆಸ್ತಿ 2023ಕ್ಕೆ 1413 ಕೋಟಿ ಮೀರಿದೆ. ಇದು ಹೇಗೆ ಸಾಧ್ಯ? ಇಷ್ಟು ವೇಗವಾಗಿ ಹಣ ಸಂಪಾದಿಸುವುದು ಹೇಗೆ? ಮೂಲ ಚೌಕಟ್ಟು ಒಪ್ಪಂದವನ್ನು ಹಾಳು ಮಾಡಿ ಓಡಿಪಿ ಮಾಡಿಕೊಂಡು ಭೂಮಿಯನ್ನು ಲೂಟಿ ಹೊಡೆದ ಪರಿಣಾಮ ಇಷ್ಟು ಆಸ್ತಿ ಸಂಪಾದನೆ ಆಗಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಈ ಅಶೋಕ್ ಖೇಣಿ ಎನ್ನುವವನು 420 ಜನರಿಗೆ ಎನ್‍ಓಸಿ ನೀಡುತ್ತಾನೆ. ನೈಸ್ ಯೋಜನೆಗೆ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಮಾರಾಟ ಮಾಡುತ್ತಾನೆ. ಯಾರಪ್ಪನ ಆಸ್ತಿಯೆಂದು ಅವನು ಈ ಆಸ್ತಿಯನ್ನು ಮಾರಾಟ ಮಾಡಿದ್ದಾನೆ? ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಅಷ್ಟೇ ಅಲ್ಲದೆ, ಸಿದ್ದಗಂಗಾ ಮಠದ ಹೆಸರಿನಲ್ಲಿ ಇದ್ದ 7 ಎಕರೆ ಭೂಮಿ ಯೋಜನೆಗೆ ತಗೊಂಡಿದ್ದರು. ಹೈಟೆಕ್ ಅಡುಗೆ ಮನೆ ಮಾಡಿಕೊಡುತ್ತೇನೆ ಎಂದು ಹಿರಿಯ ಸ್ವಾಮೀಜಿಗಳಿಗೆ ಈ ಗುತ್ತಿಗೆದಾರ ಹೇಳಿದ್ದ. ಅವರಿಗೆ ಅಡುಗೆ ಮನೆಯನ್ನು ಕಟ್ಟಿಕೊಡಲಿಲ್ಲ, ಇತ್ತ ಎನ್ ಓಸಿಯನ್ನು ಕೊಡಲಿಲ್ಲ ಎಂದು ಆರೋಪಿಸಿ, ಈ ವ್ಯಕ್ತಿ ಸಿದ್ದಗಂಗಾ ಸ್ವಾಮೀಜಿಗಳ ಬಗ್ಗೆ ಮಾತನಾಡಿದ ಧ್ವನಿ ಸುರುಳಿ ಅನ್ನು ಸುದ್ದಿಗಾರರಿಗೆ ಕುಮಾರಸ್ವಾಮಿ ಕೇಳಿಸಿದರು.

ಸಿಎಂ ಕುಟುಂಬದ ಹೆಸರಿನಲ್ಲಿ ದಾಖಲೆ?

ಸಿಎಂ ಡಿ.ಕೆ.ಶಿವಕುಮಾರ್ ಕುಟುಂಬದ ಸದಸ್ಯರ ಹೆಸರಿನಲ್ಲಿ ನೋಂದಣಿ ಆಗಿರುವ ನೈಸ್ ಆಸ್ತಿಗಳ ದಾಖಲೆಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಅವರು, ಸಿಎಂ ಅವರ ತಾಯಿ ಅವರ ಹೆಸರಿನಲ್ಲಿ ನೋಂದಣಿ ಆಗಿರುವ ಆಸ್ತಿ ಕ್ರಯ ಪತ್ರಗಳನ್ನು ಕೂಡ ಪ್ರದರ್ಶನ ಮಾಡಿದರು. 2004 ನಂವೆಬರ್ 3ರಂದು ಕೆಐಎಡಿಬಿ ಅಧಿಸೂಚನೆ ಹೊರಡಿಸಿದ್ದ ಜಮೀನನ್ನು ಡಿ.ಕೆ.ಸುರೇಶ್ ಖರೀದಿ ಮಾಡುತ್ತಾರೆ. ಆದರೆ, ನೈಸ್ ಯೋಜನೆಗೆ ಅಧಿಸೂಚನೆ ಆಗಿದ್ದ ಈ ಭೂಮಿಯನ್ನು ಯಾವ ಆಧಾರದ ಮೇಲೆ ಸುರೇಶ್ ಖರೀದಿಸಿದ್ದಾರೆ. ಅಂದು 10 ಎಕರೆ ಭೂಮಿಯನ್ನು ಅಮಾಸೆ ಗೌಡ ಎಂಬ ವ್ಯಕ್ತಿ ಹೆಸರಿನಲ್ಲಿ ಖರೀದಿ ಮಾಡಿ, ನಂತರ ಅದನ್ನು ತಮ್ಮ ತಾಯಿ ಗೌರಮ್ಮ ಅವರ ಹೆಸರಿಗೆ ಮಾಡಿಸಿಕೊಳ್ಳುತ್ತಾರೆ. ಡಿ.ಕೆ.ಶಿವಕುಮಾರ್ ಎಸಗಿರುವ ಅಕ್ರಮಕ್ಕೆ ಇದೊಂದು ಜ್ವಲಂತ ಸಾಕ್ಷಿ ಎಂದು ಕುಮಾರಸ್ವಾಮಿ ಆರೋಪಿಸಿದರು.

ಇನ್ನೊಂದು ಪ್ರಕರಣದಲ್ಲಿ ನೈಸ್ ಗೆ ಸ್ವಾಧೀನ ಮಾಡಿಕೊಡಲಾಗಿದ್ದ ಭೂಮಿಯನ್ನು 2004ರಲ್ಲಿ ಡಿ.ಕೆ.ಸುರೇಶ್ ಖರೀದಿ ಮಾಡುತ್ತಾರೆ. 2008ರಲ್ಲಿ ಡಿ.ಕೆ.ಸುರೇಶ್ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸುತ್ತಾರೆ. ವಿಚಿತ್ರವೆಂದರೆ ಅರ್ಜಿ ಹಾಕುವುದು ಡಿ.ಕೆ.ಸುರೇಶ್. ಆದರೆ ಆದೇಶ ಪತ್ರ ನೀಡುವುದು ಡಿ.ಕೆ. ಶಿವಕುಮಾರ್ ಹೆಸರಿಗೆ ಎಂದು ಅವರು ದೂರಿದರು.


300 ಎಕರೆ ಭೂಮಿ ಸಿಎಂ ಪಾಲು:ಎಚ್‍ಡಿಕೆ

ನೈಸ್ ಯೋಜನೆಯ ಸುಮಾರು 300 ಎಕರೆಗೂ ಭೂಮಿಯನ್ನು ಡಿ.ಕೆ.ಶಿವಕುಮಾರ್ ಕುಟುಂಬ ಲಪಟಾಯಿಸಿದ ಎಂದು ಆರೋಪಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೆರೆಗಳನ್ನು ಮತ್ತು ಗೋಮಾಳಗಳನ್ನು ಕೂಡ ಬಿಡದೆ ನುಂಗಿ ಹಾಕಿದ್ದಾರೆ. ಅಷ್ಟೇ ಯಾಕೆ ಹೊಸಕೆರಳ್ಳಿ ಬಳಿ ಇರುವ ಶೋಭಾ ಅಪಾರ್ಟ್ ಮೆಂಟ್ ಕೂಡ ಡಿಕೆಶಿ ಕುಟುಂಬ ಹಾಗೂ ಶೋಭಾ ಗ್ರೂಪ್ ಕಂಪೆನಿ ಜತೆ ಜಂಟಿ ಪಾಲುದಾರಿಕೆಯಲ್ಲಿ ನಿರ್ಮಾಣವಾಗಿದೆ. ಈಗ ನೋಡಿದರೆ ನೈಸ್ ಕಂಪೆನಿಯನ್ನು ನಾನೇಕೆ ಖರೀದಿಸಲಿ, ನನಗೇನು ತಲೆಕೆಟ್ಟಿದೆ ಎನ್ನುವ ಮುಖ್ಯಮಂತ್ರಿ ಬೇನಾಮಿ ಕಂಪೆನಿಗಳ ಮೂಲಕ ನಡೆಸಿರುವ ವ್ಯವಹಾರವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಬಹಳಷ್ಟು ನೈಸ್ ಆಸ್ತಿಗಳು ಆಭರಣ ಎನ್ನುವರ ಹೆಸರಿನಲ್ಲಿ ನೋಂದಣಿ ಆಗಿವೆ. ಈ ಆಭರಣ ಎನ್ನುವವರು ಯಾರು? ಎಂದು ಪ್ರಶ್ನಿಸಿದರು.

Tags

NICE Scam2G scamHD Kumaraswamy
share
ವಾರ್ತಾಭಾರತಿ
ವಾರ್ತಾಭಾರತಿ
Next Story
X