ʼಗ್ಯಾರೆಂಟಿʼ ದಿನಾಂಕ ಘೋಷಿಸಲು ಆಗ್ರಹಿಸಿ ನಾಳೆ ಜೆಡಿಎಸ್ನಿಂದ ಪ್ರತಿಭಟನೆ : ನಿಖಿಲ್ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ
ಬೆಂಗಳೂರು : ಐದು ಗ್ಯಾರೆಂಟಿ ಯೋಜನೆಗಳನ್ನು ಸಮಪರ್ಕವಾಗಿ ಜಾರಿಗೊಳಿಸಬೇಕು. ಜತೆಗೆ, ಗೃಹಲಕ್ಷ್ಮೀ ಹಣ ಯಾವಾಗ ಕೈ ಸೇರಲಿದೆ ಎಂದು ರಾಜ್ಯ ಸರಕಾರ ದಿನಾಂಕ ಪ್ರಕಟಿಸಬೇಕೆಂದು ಆಗ್ರಹಿಸಿ ನಾಳೆ (ಮಾ.3) ಜೆಡಿಎಸ್ ಹೋರಾಟ ನಡೆಸಲಿದೆ.
ರವಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಐದು ಗ್ಯಾರೆಂಟಿಗಳನ್ನು ಪ್ರಸ್ತಾಪ ಮಾಡಿದ್ದರು. ಆದರೆ ಗೃಹಲಕ್ಷ್ಮೀ ಹಣ ಇನ್ನೂ, ಕೈತಲುಪಿಲ್ಲ. ಈ ಕೂಡಲೇ ಹಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ನಾಳೆ(ಸೋಮವಾರ) ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಕ್ಯಾಲೆಂಡರ್ ತರುತ್ತೇವೆ. ರಾಜ್ಯ ಸರಕಾರ ಗೃಹಲಕ್ಷ್ಮೀ ಹಣ ಬಿಡುಗಡೆಗೊಳಿಸುವ ದಿನಾಂಕವನ್ನು ಘೋಷಣೆ ಮಾಡಲಿ. ಅಲ್ಲದೆ, ಗೃಹಲಕ್ಷ್ಮೀ ಹಣ ಲೋಕಸಭಾ ಉಪಚುನಾವಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದರು. ಆನಂತರ, ಸೂಕ್ತ ರೀತಿಯಲ್ಲಿ ಜನರಿಗೆ ಯೋಜನೆ ತಲುಪುತ್ತಿಲ್ಲ. ಇದರ ವಿರುದ್ಧ ಜೆಡಿಎಸ್ ಹೋರಾಟ ನಡೆಸಲಿದೆ ಎಂದು ಹೇಳಿದರು.





