ಅಡುಗೆ ಅನಿಲ ಪೂರೈಕೆ ವ್ಯತ್ಯಯ | ಕೋವಿಡ್ ಕಾಲದ ಸ್ಥಿತಿಗೆ ತಳ್ಳಿದರೆ ಆಶ್ಚರ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಕೇಂದ್ರ ಸರಕಾರವೇ ವಾಣಿಜ್ಯ ಬಳಕೆಯ ಎಲ್‍ಪಿಜಿ ಮತ್ತು ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು ಏರಿಸಿದೆ. ಮೋದಿಯವರ ‘ಹಿಹಿಹಿಹಿಹಿ ಫಾರಿನ್ ಪಾಲಿಸಿ’ಯು ಜನರನ್ನು ಮತ್ತೊಮ್ಮೆ ಗರಿಷ್ಠ ಮೊತ್ತದ ನೋಟ್ ರದ್ದತಿ, ಕೋವಿಡ್ ಕಾಲದ ಸ್ಥಿತಿಗೆ ತಳ್ಳಿದರೆ ಯಾವುದೇ ಆಶ್ಚರ್ಯವಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಕೇಂದ್ರ ಸರಕಾರ ಮಾತಲ್ಲಿ ‘ಸಬ್ ಚೆಂಗಾಸಿ’ ಎನ್ನುತ್ತಿದೆ, ಕೃತಿಯಲ್ಲಿ ವಾಸ್ತವದ ಆತಂಕ ವ್ಯಕ್ತವಾಗುತ್ತಿದೆ. ಎರಡು ತಿಂಗಳಿಗೆ ಬೇಕಾದ ಇಂಧನ ತೈಲ ಹಾಗೂ ಅಡುಗೆ ಅನಿಲದ ಶೇಖರಣೆ ಇದೆ, ನಾವೆಲ್ಲವನ್ನೂ ನಿಭಾಯಿಸುತ್ತೇವೆ ಎನ್ನುತ್ತಿದ್ದ ಕೇಂದ್ರ ಸರ್ಕಾರ, ಎಸ್ಮಾ ಜಾರಿಗೊಳಿಸಿ, ಜನರ ಅಗತ್ಯದ ವಸ್ತುಗಳ ಉತ್ಪಾದನೆ, ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸಲು ಹೊರಟಿದೆ’ ಎಂದು ಟೀಕಿಸಿದ್ದಾರೆ.
‘ಎಲ್‍ಪಿಜಿ ಸಿಲಿಂಡರ್ ವ್ಯತ್ಯಯದ ಕಾರಣ ದೇಶದಲ್ಲಿನ ಹೋಟೆಲ್ ಮುಚ್ಚಬೇಕಾಗಬಹುದೆಂದು ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ. ಕೇಂದ್ರ ಸರಕಾರ ಎಲ್‍ಪಿಜಿ ಗ್ಯಾಸ್ ರಿಫಿಲ್ ಅವಧಿಯನ್ನು 25ದಿನಗಳಿಗೆ ವಿಸ್ತರಿಸಿದೆ, ಜನ ಸಿಲಿಂಡರ್ ಗಳಿಗಾಗಿ ಪರದಾಡುವ ದೃಶ್ಯಗಳು ದಾರಾಳವಾಗಿವೆ, ನೋಟ್ ನಿಷೇಧದ ಸಮಯದಲ್ಲಿ ಎಟಿಎಂ ಮುಂದೆ ಪರದಾಡಿದಂತೆಯೇ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಮಾತಲ್ಲಿ "ಸಬ್ ಚೆಂಗಾಸಿ" ಎನ್ನುತ್ತಿದೆ, ಕೃತಿಯಲ್ಲಿ ವಾಸ್ತವದ ಆತಂಕ ವ್ಯಕ್ತವಾಗುತ್ತಿದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) March 12, 2026
- ಎರಡು ತಿಂಗಳಿಗೆ ಬೇಕಾದ ಇಂಧನ ತೈಲ ಹಾಗೂ ಅಡುಗೆ ಅನಿಲದ ಶೇಖರಣೆ ಇದೆ, ನಾವೆಲ್ಲವನ್ನೂ ನಿಭಾಯಿಸುತ್ತೇವೆ ಎನ್ನುತ್ತಿದ್ದ ಕೇಂದ್ರ ಸರ್ಕಾರ,
ಎಸ್ಮಾ (Essential Commodities Act, 1955 - ECA) ಜಾರಿಗೊಳಿಸಿ, ಜನರ ಅಗತ್ಯದ… pic.twitter.com/AwntIN4C5d







