Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಆಹಾರ ತಜ್ಞ, ಚಿಂತಕ ಕೆ.ಸಿ.ರಘು ಅವರ ನುಡಿ...

ಆಹಾರ ತಜ್ಞ, ಚಿಂತಕ ಕೆ.ಸಿ.ರಘು ಅವರ ನುಡಿ ನಮನ ಕಾರ್ಯಕ್ರಮ

ವಾರ್ತಾಭಾರತಿವಾರ್ತಾಭಾರತಿ29 Oct 2023 8:56 PM IST
share
ಆಹಾರ ತಜ್ಞ, ಚಿಂತಕ ಕೆ.ಸಿ.ರಘು ಅವರ ನುಡಿ ನಮನ ಕಾರ್ಯಕ್ರಮ

ಬೆಂಗಳೂರು: ಆಹಾರ ಹಾಗೂ ಆರೋಗ್ಯ ಕುರಿತು ಚಿಕ್ಕ ವಯಸ್ಸಿನಲ್ಲಿ ಸಮಾಜಕ್ಕೆ ಅರಿವು ಮೂಡಿಸಿರುವ ಕೆ.ಸಿ.ರಘು ಅವರಿಗೆ ರಾಜ್ಯ ಸರಕಾರವೂ ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಬೇಕು ಎಂದು ಕಾಂಗ್ರೆಸ್ ನಾಯಕ ವಿ.ಆರ್.ಸುದರ್ಶನ್ ಒತ್ತಾಯಿಸಿದ್ದಾರೆ.

ರವಿವಾರ ಇಲ್ಲಿನ ಸಂಜಯನಗರದ ರಮಣ ಮಹರ್ಷಿ ಸಭಾಂಗಣದಲ್ಲಿ ಪ್ರಿಸ್ಟಿನ್ ಆಗ್ರ್ಯಾನಿಕ್ಸ್ ಆಡಳಿತ ಮಂಡಳಿ ಆಯೋಜಿಸಿದ್ದ ಆಹಾರ ತಜ್ಞ, ಚಿಂತಕ ದಿವಂಗತ ಕೆ.ಸಿ.ರಘು ಅವರ ನೆನಪಿನಲ್ಲಿ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲಿಯೇ ರಘು ಅವರು ಅಪಾರ ಸಾಧನೆ, ಸಂಶೋಧನೆ ಮಾಡಿದ್ದಾರೆ.ಇಂತಹ ವ್ಯಕ್ತಿತ್ವ, ಅವರ ಸಂದೇಶಗಳು ಮುಂದಿನ ಜನಾಂಗಗಕ್ಕೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ರಘು ಅವರಿಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದರು.

ಭಾರತೀಯ ಆಹಾರ ಪದ್ಧತಿಯೇ ಒಂದು ವೈಜ್ಞಾನಿಕ. ಇದರ ಕುರಿತು ಪ್ರಮುಖ ಸ್ಥಾನದಲ್ಲಿ ನಿಂತು ರಘು ಅವರು ಬೆಳಕು ಚೆಲ್ಲಿದ್ದಾರೆ ಎಂದ ಅವರು, ಔಷಾಧಿ ಮಾಫಿಯಾ ಕುರಿತು ಈ ಹಿಂದೆಯೇ ರಾಜ್ಯ ಸರಕಾರಕ್ಕೆ ವರದಿಯನ್ನು ಸಲ್ಲಿಸಲಾಗಿತ್ತು. ಸದ್ಯ ಆ ವರದಿಯನ್ನು ಪರಿಶೀಲನೆ ನಡೆಸಿ ಜಾರಿಗೆ ತರಲು ಸರಕಾರ ಮುಂದಾಗಬೇಕಾಗಿದೆ ಎಂದು ಅವರು ಹೇಳಿದರು.

ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಯಾವ ಕಾಯಿಲೆ ಅನ್ನು ಸಂಶೋಧನೆಗೆ ಒಳಪಡಿಸಿ, ಆ ಕಾಯಿಲೆ ಹುಟ್ಟುದಂತೆ ಪರಿಣಾಮಕಾರಿ ಆಗಿ ಅಧ್ಯಯನ ಮಾಡಿದ ರಘು ಅವರಿಗೆ ಅದೇ ಕಾಯಿಲೆ ಅವರಿಗೆ ಬಂದಾಗ ಆಘಾತಕ್ಕೆ ಒಳಗಾಗಿದ್ದರು.ಇದರ ನಡುವೆಯೂ ರಘು ಈ ಕ್ಯಾನ್ಸರ್ ವಿರುದ್ಧ ಬಲವಾಗಿಯೇ ಹೋರಾಟ ನಡೆಸಿದರು ಎಂದು ನೆನಪು ಮಾಡಿಕೊಂಡರು.

ರಘು ಅವರು ಪ್ರಿಸ್ಟಿನ್ ಆಗ್ರ್ಯಾನಿಕ್ಸ್ ಅನ್ನು ಪಂತಾಜಲಿಗಿಂತಲೂ ಹೆಚ್ಚು ಪಟ್ಟು ಉದ್ಯಮವಾಗಿ ಬೆಳೆಸಬಹುದಾಗಿತ್ತು ಆದರೆ, ಅವರಿಗೆ ಉದ್ಯಮಕ್ಕಿಂತ ಸಂಶೋಧನೆ, ವಸ್ತುಗಳಲ್ಲಿ ಗುಣಮಟ್ಟ ಹೆಚ್ಚಿಸುವ ಆಸಕ್ತಿಯಿತ್ತು. ಇದೊಂದು ಮಾರುಕಟ್ಟೆ ಮಾತ್ರವಲ್ಲದೆ, ಜವಾಬ್ದಾರಿ ಎಂದೇ ಭಾವಿಸಿದ್ದರು. ಹೀಗಾಗಿ, ಪ್ರಚಾರದ ಗೀಳಿಗೆ ಅವರು ಮುಂದಾಗದೆ ತಮ್ಮ ಕರ್ತವ್ಯದಂತೆ ಪ್ರಿಸ್ಟಿನ್ ಆಗ್ರ್ಯಾನಿಕ್ಸ್ ನಡೆಸುತ್ತಿದ್ದರು ಎಂದು ಅವರು ಹೇಳಿದರು.

ಚಿಂತಕ ಎಲ್.ಎನ್.ಮುಕುಂದರಾಜ್ ಮಾತನಾಡಿ, ರಘು ಮಾಡಿದ ಪ್ರಯತ್ನಗಳು ಎಲ್ಲ ಕಾಲಕ್ಕೂ ಜೀವಂತವಾಗಿ ಉಳಿಯಲಿವೆ. ಆರೋಗ್ಯ ಕುರಿತು ಅವರು ನೀಡುತ್ತಿದ್ದ ಮಾಹಿತಿ, ಸಂದೇಶಗಳು ಸಮಾಜವನ್ನು ಆರೋಗ್ಯಕರವಾಗಿ ಇಡುವಂತೆ ಮಾಡಲಿದೆ ಎಂದರು.

ಕಾಂಗ್ರೆಸ್ ನಾಯಕ ನಿಕೇತ್ ರಾಜ್ ಮೌರ್ಯ ಮಾತನಾಡಿ, ರಘು ಎಂದರೆ ಆಹಾರ, ವಿಚಾರ, ಸಾಹಿತ್ಯ, ಇತಿಹಾಸ ಹೀಗೆ ಅನೇಕ ಮುಖಗಳು ಇರುವ ವ್ಯಕ್ತಿತ್ವ ಅವರದ್ದು. ಬದುಕಿನಲ್ಲೂ ಸಾಕಷ್ಟು ನೋವು ಇದ್ದರೂ, ಈ ಸಮಾಜಕ್ಕೆ ತಮ್ಮದೇ ಆದ ನೆನಪು, ಸಾಧನೆ ಅನ್ನು ರಘು ಅವರು ಬಿಟ್ಟು ಹೋಗಿದ್ದಾರೆ. ಅವರ ಹಾದಿಯಲ್ಲಿ ಇಂದಿನ ಯುವ ಪೀಳಿಗೆ ಸಾಗಬೇಕಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ. ವೆಂಕಟೇಶಯ್ಯ,ಹಿರಿಯ ಐಎಎಸ್ ಕರೀಗೌಡ‌, ಮಾಲೂರು ಶಿವಣ್ಣ ಸೇರಿದಂತೆ ಪ್ರಮುಖರಿದ್ದರು.

‘ಚಿಕ್ಕ ವಯಸ್ಸಿಯನಲ್ಲಿಯೇ ಸಾಕಷ್ಟು ಜ್ಞಾನವನ್ನು ಪಡೆದ ಕೆ.ಸಿ.ರಘು ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ನಮ್ಮಲ್ಲಿನ ಜ್ಞಾನ, ಅರಿವು ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತೆ ಆಗಲಿದೆ’ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ನುಡಿದರು.

ಪ್ರಶಸ್ತಿಗೆ ಮೊದಲು ಜಾತಿ, ಸಂಬಂಧಿಕರು..!

‘ಸಾಧನೆಯನ್ನು ಗುರುತಿಸಿ ರಾಜ್ಯೋತ್ಸವ, ಪದ್ಮಶ್ರೀ ಸೇರಿದಂತೆ ಇನ್ನಿತರೆ ಗೌರವಗಳನ್ನು ನೀಡುವ ಕಾಲ ಈಗಲೂ ಬದಲಾಗಿದೆ. ಪ್ರಶಸ್ತಿ ನೀಡಬೇಕಾದರೆ ಮೊದಲು ಜಾತಿ, ಸಂಬಂಧಿಕರು, ಸ್ನೇಹಿತರನ್ನೆ ಪರಿಗಣಿಸುತ್ತಾರೆ.ಇಲ್ಲದಿದ್ದರೆ ರಾಜಕೀಯವಾಗಿ ಲಾಭವಾದರೆ ಅವರಿಗೆ ನೀಡುತ್ತಾರೆ. ಇದು ಎಲ್ಲ ಪಕ್ಷಗಳ ಆಡಳಿತದಲ್ಲಿಯೂ ನಡೆದುಕೊಂಡು ಬಂದಿದೆ. ಆದರೆ, ರಘು ಅವರು ಇಂತಹ ಪ್ರಶಸ್ತಿಗಳನ್ನು ಮೀರಿದಂತಹ ವ್ಯಕ್ತಿತ್ವ’ ಎಂದು ಬಿ.ಎಲ್.ಶಂಕರ್ ನುಡಿದರು.

ಕ್ಯಾನ್ಸರ್ ಔಷಧಿ ಸಂಶೋಧನೆಗೆ ‘ಮಾಫಿಯಾ ಅಡ್ಡಗಾಲು’: ದಿನೇಶ್ ಅಮೀನ್ ಮಟ್ಟು

‘ಮಾರಣಾಂತಿಕ ಕಾಯಿಲೆ ಕ್ಯಾನ್ಸರ್‍ಗೆ ಸೂಕ್ತ ರೀತಿಯ ಔಷಧಿ ಕಂಡು ಹಿಡಿಯುವ ಸಂಶೋಧನೆಗೆ ಮಾಫಿಯಾವೊಂದು ಉದ್ದೇಶಪೂರಕವಾಗಿ ಅಡ್ಡಗಾಲು ಹಾಕುತ್ತಿದೆ. ಹೀಗಾಗಿಯೇ, ಇಷ್ಟೊಂದು ಕಾಲ ಕಳೆದರೂ, ನಿರ್ದಿಷ್ಟ ಕ್ಯಾನ್ಸರ್ ಔಷಧಿ ಕೈ ಸೇರುತ್ತಿಲ್ಲ’ ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ಇಂದು ನಾವು ಚಂದ್ರಯಾನದ ಕುರಿತು ಚರ್ಚಿಸುತ್ತಿದ್ದೇವೆ. ಆದರೆ, ಇಂದಿಗೂ ಕ್ಯಾನ್ಸರ್ ಔಷದಿ ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮೂಲ ಕಾರಣ ಆಸ್ಪತ್ರೆಗಳ ಔಷಾಧವಿಧಾನ, ಯಂತ್ರೋಪಕರಣಗಳ ವ್ಯಾಪಾರ ವಾಹಿವಾಟಿನ ಕೈವಾಡ ಇದೆ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಮಟ್ಟದಿಂದಲೇ ಕ್ಯಾನ್ಸರ್ ರೋಗಗಕ್ಕೆ ಸೂಕ್ತ ಔಷಧಿ ಕಂಡು ಹಿಡಿಯದಂತೆ ಮಾಫಿಯಾವೊಂದು ವೈದ್ಯ ವಿಜ್ಞಾನಿಗಳ ಮೇಲೆ ಒತ್ತಡ ಹೇರುತ್ತಿದೆ.ಹೀಗಾಗಿಯೇ, ಇಷ್ಟೊಂದು ಕಾಲ ಕಳೆದರೂ, ಅನೇಕ ಜೀವಗಳು ಬಲಿಯಾದರೂ ಔಷಧಿ ಜಗತ್ತಿಗೆ ಸಿಗುತ್ತಿಲ್ಲ. ಒಂದು ವೇಳೆ ಔಷಧಿ ಕಂಡು ಹಿಡಿದರೆ, ಅದರ ಚಿಕಿತ್ಸಾ ವಿಧಾನ, ಆಸ್ಪತ್ರೆಗಳ ವ್ಯಾಪಾರ, ಆಧುನಿಕ ಯಂತ್ರೋಪಕರಣಗಳು ಮೂಲೆ ಸೇರಲಿವೆ. ಚಿಕಿತ್ಸಾ ವೆಚ್ಚವೂ ತಗ್ಗಲಿದೆ. ಇದೇ ಕಾರಣಕ್ಕಾಗಿ ನಿರ್ದಿಷ್ಟ ಔಷಧಿ ಕಂಡುಹಿಡಿಯಲು ಬಿಡುತ್ತಿಲ್ಲ ಎಂದು ಅವರು ವಿಶ್ಲೇಷಿಸಿದರು.

ನಮ್ಮ ದೇಶದಲ್ಲಿಯೇ ಐಸಿಎಂಆರ್ ವರದಿ ಪ್ರಕಾರ 14.5 ಲಕ್ಷ ಕ್ಯಾನ್ಸರ್ ರೋಗಿಗಳು ಇದ್ದು, ಒಂದೇ ವರ್ಷದಲ್ಲಿಯೇ 8.5 ಲಕ್ಷ ಮಂದಿ ಈ ಮಾರಣಾಂತಿಕ ಕಾಯಿಲೆಗೆ ಬಲಿಯಾಗಿದ್ದಾರೆ.ಅಷ್ಟೇ ಮಾತ್ರವಲ್ಲದೆ, ಪ್ರತಿ 68 ಜನರ ಪೈಕಿ ಓರ್ವರಿಗೆ ಈ ಕಾಯಿಲೆ ಬಾಧಿಸುತ್ತಿದೆ ಎಂದು ದೃಢಪಟ್ಟಿದೆ.ಹೀಗಿರುವಾಗ, ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇನ್ನೂ, ಇದರ ಚಿಕಿತ್ಸಾ ವಿಧಾನವೂ ಬಹಳ ಭೀಕರವಾಗಿದೆ. ಅದಷ್ಟು ಇದಕ್ಕೆ ಪರಿಣಾಮಕಾರಿ ಔಷಧಿ ಕಂಡುಹಿಡಿದು ಮನುಕುಲ ರಕ್ಷಣೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಆರೋಗ್ಯ, ಆಹಾರ, ಸಾಹಿತ್ಯ, ಆಧ್ಯಾತ್ಮಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ರಘು ಅವರ ನಿಧನ ಈ ಸಮಾಜಕ್ಕೆ ತುಂಬಲಾದ ನಷ್ಟವಾಗಿದೆ. ಅವರ ಕ್ಯಾನ್ಸರ್ ನಿಂದ ಹೊರಬಂದಿದ್ದರೂ, ಈ ಜಗತ್ತಿಗೆ ಇನ್ನಷ್ಟು ಮಾಹಿತಿ, ಅರಿವು ದೊರೆಯುತಿತ್ತು. ಅವರಿಗಿಂತ ಹೆಚ್ಚು ಆಸಕ್ತಿಯುಳ್ಳ ವ್ಯಕ್ತಿ ಯಾರೋ ಇರಲಿಲ್ಲ. ಸತ್ಯ, ವಸ್ತುನಿಷ್ಠತೆ ಮಾಹಿತಿ ಹಂಚಿಕೊಳ್ಳುವವರಲ್ಲಿ ರಘು ಅವರು ಪ್ರಮುಖರು. ಅವರ ಸಾವು ಅಚ್ಚರಿ ತಂದಿದೆ ಎಂದು ಮಟ್ಟು ನುಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X