ರಾಜ್ಯ ಮಾಹಿತಿ ಆಯೋಗದ ನೂತನ ಆಯುಕ್ತರ ಪದಗ್ರಹಣ

ಬೆಂಗಳೂರು: ರಾಜ್ಯ ಮಾಹಿತಿ ಅಯೋಗದ ನೂತನ ಮುಖ್ಯ ಆಯುಕ್ತ ಹಾಗೂ ಏಳು ಮಂದಿ ಆಯುಕ್ತರಿಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದರು.
ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ಆಶಿತ್ ಮೋಹನ್ ಪ್ರಸಾದ್, ಆಯುಕ್ತರಾಗಿ ರಾಮನ್ ಕೆ., ಡಾ.ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ.ಚನ್ನಾಳ, ರಾಜಶೇಖರ ಎಸ್., ಬದ್ರುದ್ದೀನ್ ಕೆ. ಮಾಣಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ಮಮತಾ ಬಿ.ಆರ್. ಅವರು ಪ್ರಮಾಣ ಸ್ವೀಕರಿಸಿದರು.
ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು. ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಪ್ರಮಾಣ ಸ್ವೀಕಾರ ಪ್ರಕ್ರಿಯೆ ನಿರ್ವಹಿಸಿದರು.
(ಬದ್ರುದ್ದೀನ್ ಕೆ. ಮಾಣಿ ಅವರಿಂದ ಪ್ರಮಾಣ ವಚಣ ಸ್ವೀಕಾರ)
Next Story