ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನ ಅವರನ್ನು ವಿಚಾರಣೆ ಮಾಡುವಂತೆ ಒತ್ತಾಯ

ಬೆಂಗಳೂರು, ನ.6: ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರ್ ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನರ ಹೆಸರು ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುನಿರತ್ನರನ್ನು ವಿಚಾರಣೆ ನಡೆಸುವಂತೆ ವಕೀಲ ಹಾಗೂ ಕೆಪಿಸಿಸಿ ಕಾನೂನು ಘಟಕದ ಮುಖಂಡ ಸೂರ್ಯ ಮುಕುಂದರಾಜ್ ಒತ್ತಾಯಿಸಿದ್ದಾರೆ.
''ಕೊಲೆಯಾಗಿರುವ ಹಿರಿಯ ಭೂ
ವಿಜ್ಞಾನಿ ಪ್ರತಿಮಾ ಅವರು ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಶಾಸಕ ಸಿಡಿ ಕಂಪನಿಗಳ ಮಾಲೀಕ ಮುನಿರತ್ನ ವಿರುದ್ಧ ಅಕ್ರಮ ಸ್ಪೋಟಕ ಬಳಕೆ ಮಾಡಿ ಕಲ್ಲು ಶಿಲೆಗಳನ್ನು ಪುಡಿ ಮಾಡಿದ್ದ ಸಂಬಂಧ ಹಾಗೂ ಸರ್ಕಾರಕ್ಕೆ 25 ಲಕ್ಷ ರಾಯಧನ ನಷ್ಟ ಮಾಡಿದ್ದ ಕಾರಣಕ್ಕೆ ಹುಣಸಮಾರನಹಳ್ಳಿ ಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಬಹುಶಃ ಇವರ ಸಹೋದರನ ಹಳೆ ನಂಟು ಈ ಕೊಲೆ ಪ್ರಕರಣದಲ್ಲಿ ಏನಾದರೂ ಹಸ್ತಕ್ಷೇಪ ಮಾಡಿರಬಹುದು ಪೊಲೀಸರು ತನಿಖೆ ನಡೆಸಬಹುದು'' ಎಂದು ಸೂರ್ಯ ಮುಕುಂದರಾಜ್ *ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ*.
ಅಲ್ಲದೇ, ಹುಣಸಮಾರನಹಳ್ಳಿ ಪ್ರಕರಣದಲ್ಲಿ ಶಾಸಕ ಮುನಿರತ್ನ 2ನೇ ಆರೋಪಿಯಾಗಿದ್ದಾರೆ ಎಂದು ಸೂರ್ಯ ಮುಕುಂದರಾಜ್ ಅವರು ದಾಖಲೆಗಳ ಜೊತೆ ಮಾಹಿತಿ ನೀಡಿದ್ದಾರೆ.
''ಅಕ್ರಮ ಗಣಿಗಾರಿಕೆ ಬಗ್ಗೆ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ಪ್ರತಿಮಾ ಅವರ ಸಾವಿನ ಬಗ್ಗೆ ತನಿಖೆ ಆದ ಮೇಲೆ ಸ್ಪಷ್ಟವಾಗಿ ಹೇಳಲಾಗುವುದು. ಜೊತೆಗೆ ನಿನ್ನೆಯೇ ಇಲಾಖೆಯ ವಿಡಿಯೋ ಕಾನ್ಪರೆನ್ಸ್ ನಲ್ಲಿ ಪ್ರತಿಮಾ ಅವರು ಭಾಗಿ ಆಗಿದ್ದರು. ಅವರು ಒಳ್ಳೆಯ ಅಧಿಕಾರಿಯಾಗಿದ್ದರು''
ಎಸ್ ಎಸ್ ಮಲ್ಲಿಕಾರ್ಜುನ್- ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಸಚಿವರು







