ಶುಭಾ ವೆಂಕಟೇಶ ಅಯ್ಯಂಗಾರ್ ರಿಗೆ ಪದ್ಮಶ್ರೀ ಪ್ರಶಸ್ತಿ

ಶುಭಾ ವೆಂಕಟೇಶ ಅಯ್ಯಂಗಾರ್ ಅವರು ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದ (ಎನ್‍ಎಎಲ್) ಮೆಟೀರಿಯಲ್ ಸೈನ್ಸಸ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಪ್ರಸಿದ್ಧ ವಿಜ್ಞಾನಿಯಾಗಿದ್ದಾರೆ.
ಸುಮಾರು 40 ವರ್ಷಗಳ ಕಾಲ ಎನ್‍ಎಎಲ್‍ನಲ್ಲಿ ಸಂಶೋಧಕಿಯಾಗಿ ಕಾರ್ಯನಿರ್ವಹಿಸಿರುವ ಅವರು, ವಿಮಾನ ನಿಲ್ದಾಣಗಳಲ್ಲಿ ಬಳಸುವ ರನ್‍ವೇ ಗೋಚರತೆ ಅಳೆಯುವ ಉಪಕರಣವಾದ ‘ಟ್ರಾನ್ಸ್‍ಮಿಸೋಮೀಟರ್' ಅನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶುಭಾ ಅಯ್ಯಂಗಾರ್ ತಂಡ ಅಭಿವೃದ್ಧಿಪಡಿಸಿದ ಈ ಉಪಕರಣಗಳನ್ನು ಲಕ್ನೋ, ದೆಹಲಿ ಮತ್ತು ಕೋಲ್ಕತ್ತಾ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ.
Next Story





