ನಾವಿಕನಿಲ್ಲದ ದೋಣಿಯಂತಿರುವ ಬಿಜೆಪಿಯ ನಾಟಕಗಳಿಗೆ ರಾಜ್ಯದ ಜನತೆ ಬಲಿಪಶುವಾಗುವುದಿಲ್ಲ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಿಕೊಳ್ಳಗಾಗದವರು ಸದನದ ನಿಯಮಾವಳಿ ಗಾಳಿಗೆ ತೂರಿ ‘ಮೊಂಡಾಟ’ ನಡೆಸಿದ್ದು ಅಕ್ಷಮ್ಯ ಅಪರಾಧ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜನವಿರೋಧಿ ರಾಜಕಾರಣ ಬಿಜೆಪಿಯನ್ನು ಈಗಾಗಲೇ 63ಕ್ಕೆ ತಂದು ನಿಲ್ಲಿಸಿದೆ. ಆದರೂ ಇವರು ಪಾಠ ಕಲಿತಿಲ್ಲ. ಇದೇ ಬಿಜೆಪಿ, ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಾಗ ಒಂದು ತಿಂಗಳ ಕಾಲ ಸಂಪುಟವನ್ನೇ ರಚಿಸಿರಲಿಲ್ಲ. ಆದರೆ ನಾವು ಸಂಪೂರ್ಣ ಸರ್ಕಾರದೊಂದಿಗೆ ಜನರಿಗೆ ನೀಡಿದ್ದ ವಾಗ್ದಾನ ಈಡೇರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ನಾವಿಕನಿಲ್ಲದ ದೋಣಿಯಂತಿರುವ ಬಿಜೆಪಿ ಪಕ್ಷದವರ ಅನುಚಿತ ವರ್ತನೆ ಯಾವುದೇ ರೀತಿಯಲ್ಲೂ ಸದನ ಯೋಗ್ಯವಲ್ಲ. ರಾಜ್ಯದ ಜನತೆ ಹುಷಾರಾಗಿದ್ದು, ಈ ನಾಟಕಗಳಿಗೆ ಬಲಿಪಶುವಾಗುವುದಿಲ್ಲ ಎನ್ನುವುದು ಬಿಜೆಪಿ ನಾಯಕರಿಗೆ ಬೇಗ ಅರ್ಥವಾಗುವಂತಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಜನವಿರೋಧಿ ರಾಜಕಾರಣ ಬಿಜೆಪಿಯನ್ನು ಈಗಾಗಲೇ 63 ಮತ್ತೊಂದಕ್ಕೆ ತಂದು ನಿಲ್ಲಿಸಿದೆ. ಆದರೂ ಇವರು ಪಾಠ ಕಲಿತಿಲ್ಲಾ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 4, 2023
ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಿಕೊಳ್ಳಗಾಗದವರು ಇಂದು ಸದನದ ನಿಯಮಾವಳಿ ಗಾಳಿಗೆ ತೂರಿ ‘ಮೊಂಡಾಟ’ ನಡೆಸಿದ್ದು ಅಕ್ಷಮ್ಯ ಅಪರಾಧ.
ಇದೇ ಬಿಜೆಪಿ, ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಾಗ ಒಂದು ತಿಂಗಳ ಕಾಲ ಸಂಪುಟವನ್ನೇ…