ಕೋವಿಡ್ ಲಸಿಕೆ ಕುರಿತ ಹೇಳಿಕೆ | ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆಯಾಚಿಸಲಿ: ಪಿಯೂಷ್ ಗೋಯಲ್

ಪಿಯೂಷ್ ಗೋಯಲ್ | PC : PTI
ಬೆಂಗಳೂರು : ಕೋವಿಡ್ ಸಮಯದಲ್ಲಿ ಭಾರತದ ಲಸಿಕೆ ಸಾಮರ್ಥ್ಯ ಜಗತ್ತಿಗೆ ತಿಳಿದಿದೆ. ಆದರೆ, ನಮ್ಮ ವಿಜ್ಞಾನಿಗಳ ಕುರಿತು ಅನುಮಾನಿಸಿ ಆಡಿರುವ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಭಾರತದ ಲಸಿಕೆ ಸಾಮರ್ಥ್ಯ ಜಗತ್ತಿಗೆ ತಿಳಿದಿದೆ. ಇಂತಹ ಲಸಿಕೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಅನುಮಾನದ ಹಿಂದೆ ಮತ್ತು ಅವರು ಆಡಿರುವ ಮಾತಿನ ಹಿಂದೆ ಏನಿದೆ ಎಂಬುದು ಗೊತ್ತಿಲ್ಲ ಎಂದರು.
ಇಡೀ ದೇಶದ ಜನರನ್ನು ಲಸಿಕೆ ಕಾರ್ಯಕ್ರಮಕ್ಕೆ ಒಳಪಡಿಸಲಾಗಿದೆ. ನಮ್ಮ ದೇಶಕ್ಕೆ ಹೆಮ್ಮೆ ಮೂಡಿಸಿದ ಲಸಿಕೆ ಬಗ್ಗೆ ಇದೀಗ ಸಿದ್ದರಾಮಯ್ಯ ಅವರ ಹೇಳಿಕೆಯು ದೇಶವನ್ನು ಕೆಟ್ಟದಾಗಿ ತೋರಿಸಲು ಕೆಲವು ವಿದೇಶಿ ಶಕ್ತಿಗಳ ಕಾರ್ಯಸೂಚಿಯನ್ನು ಮುಖ್ಯಮಂತ್ರಿ ಹೊಂದಿದ್ದಾರೆ ಎಂಬಂತೆ ತೋರುತ್ತಿದೆ ಎಂದು ಅವರು ಟೀಕಿಸಿದರು.