ವಿಶೇಷ ವಿಮಾನದ ಮೂಲಕ ಹೆಚ್ಎಎಲ್ನಿಂದ ದೆಹಲಿಗೆ ತೆರಳಿದ ಪ್ರಧಾನಿ ಮೋದಿ
![ವಿಶೇಷ ವಿಮಾನದ ಮೂಲಕ ಹೆಚ್ಎಎಲ್ನಿಂದ ದೆಹಲಿಗೆ ತೆರಳಿದ ಪ್ರಧಾನಿ ಮೋದಿ ವಿಶೇಷ ವಿಮಾನದ ಮೂಲಕ ಹೆಚ್ಎಎಲ್ನಿಂದ ದೆಹಲಿಗೆ ತೆರಳಿದ ಪ್ರಧಾನಿ ಮೋದಿ](https://www.varthabharati.in/h-upload/2023/08/26/1183938-whatsapp-image-2023-08-26-at-94944-am.webp)
ಬೆಂಗಳೂರು, ಆ. 26: ಚಂದ್ರಯಾನ-3 ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಗಿನ ಜಾವ ನಗರಕ್ಕೆ ಆಗಮಿಸಿದ್ದರು.
ನಗರದ ಇಸ್ರೋ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ವಿಜ್ಞಾನಿಗಳನ್ನು ಅಭಿನಂದಿಸಿ ಮಾತನಾಡಿದರು.
ನಂತರ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ತೆರಳಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಧಾನಿಗಳನ್ನು ಬೀಳ್ಕೊಟ್ಟರು.
Next Story