ಸೌಮೇಂದು ಮುಖರ್ಜಿ, ಎಚ್. ದಾದಾಪೀರ್ ಸೇರಿ ರಾಜ್ಯದ 23 ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ

ಸೌಮೇಂದು ಮುಖರ್ಜಿ / ಎಚ್. ದಾದಾಪೀರ್
ಬೆಂಗಳೂರು: ಎಪ್ಪತ್ತೈದನೇ ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ವಿಶಿಷ್ಟ ಸೇವೆಗಾಗಿ ಎಡಿಜಿಪಿ(ಆಡಳಿತ) ಸೌಮೇಂದ್ರ ಮುಖರ್ಜಿ, ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್ ಎಸ್ಸೈ ದಾದಾಪೀರ್ ಎಚ್. ಅವರು ಸೇರಿ ರಾಜ್ಯದ 23 ಪೊಲೀಸ್ ಅಧಿಕಾರಿಗಳು ಈ ಗೌರವಕ್ಕೆ ಭಾಜನರಾಗಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುತ್ತದೆ. ವಿಶಿಷ್ಟ ಸೇವೆಗಾಗಿ ಎಡಿಜಿಪಿ ಸೌಮೇಂದ್ರ ಮುಖರ್ಜಿ ಹಾಗೂ ಡಿವೈಎಸ್ಪಿ ಸುಧೀರ್ ಮಹದೇವ್ ಹೆಗ್ಡೆ, ಕೇಂದ್ರ ಗೃಹ ಮಂತ್ರಾಲಯದಲ್ಲಿ ನಿಯೋಜನೆ ಮೇಲಿರುವ ಕರ್ನಾಟಕ ಕೇಡರ್ನ ಎಂಎಚ್ಎ ಜಂಟಿ ನಿರ್ದೇಶಕ ಪಂಕಜ್ ಕುಮಾರ್ ಠಾಕೂರ್ ಅವರಿಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.
ಶ್ಲಾಘನೀಯ ಸೇವಾ ಪದಕ ಪುರಸ್ಕೃತ: ಕೇಂದ್ರ ಗೃಹ ಮಂತ್ರಾಲಯದಲ್ಲಿ ನಿಯೋಜನೆ ಮೇಲಿರುವ ಕರ್ನಾಟಕ ಕೇಡರ್ನ ಸಿಬಿಐ ಜಂಟಿ ನಿರ್ದೇಶಕ ಪ್ರವೀಣ್ ಮಧುಕರ್ ಪವಾರ್, ಎಂಎಚ್ಎ ಉಪನಿರ್ದೇಶಕ ಕೌಶಲೇಂದ್ರ ಕುಮಾರ್, ಬೆಂಗಳೂರು ಪೂರ್ವ ವಿಭಾಗ ಅಪರ ಪೊಲೀಸ್ ಆಯುಕ್ತ ರಮಣ್ ಗುಪ್ತ, ಶಿವಮೊಗ್ಗ ಜಿಲ್ಲೆ ಅಪರ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್.ಬಿ., ಕೆಎಸ್ಐಎಸ್ಎಫ್ 1ನೆ ಪಡೆ ಕಮಾಂಡೆಂಟ್ ಎ.ನಾಗರಾಜ, ಯಾದಗಿರಿ ಅಪರ ಪೊಲೀಸ್ ಅಧೀಕ್ಷಕ ಎಸ್.ಪಿ.ಧರಣೀಶ್, ಬೆಂಗಳೂರು ದಕ್ಷಿಣ ವಿಭಾಗದ ಎಸಿಪಿ ನಾರಾಯಣಸ್ವಾಮಿ, ರಾಜ್ಯ ಗುಪ್ತವಾರ್ತೆ ಸಹಾಯಕ ನಿರ್ದೇಶಕ ವಿ.ರಘುಕುಮಾರ್, ಸಿಐಡಿ ಡಿವೈಎಸ್ಪಿ ಬಿ.ಎಸ್.ಶ್ರೀನಿವಾಸ ರಾಜ್, ಚನ್ನರಾಯಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್.ವೀರೇಂದ್ರ ಪ್ರಸಾದ್.
ದೊಡ್ಡಬೆಳವಂಗಲ ಪೊಲೀಸ್ ಇನ್ಸ್ಪೆಕ್ಟರ್ ಎಂ.ಆರ್.ಹರೀಶ್, ಕೆಎಸ್ಆರ್ಪಿ ವಿಶೇಷ ಆರ್ಎಸ್ಐ ಆರ್.ಪುಂಡಲಿಕ, ಮಂಗಳೂರು ನಗರ ಬಜ್ಪೆ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪನಿರೀಕ್ಷಕ ರಾಮ, ಬೆಂಗಳೂರು ವೈರ್ಲೆಸ್ ಕೇಂದ್ರ ಕಚೇರಿ ಎಎಸ್ಸೈ ಸುರೇಶ್ ಆರ್.ಪುಡಕಲಕಟ್ಟಿ, ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್ಎಸ್ಸೈ ದಾದಾಪೀರ್ ಎಚ್., ರಾಜ್ಯ ಗುಪ್ತವಾರ್ತೆ ಸಹಾಯಕ ಗುಪ್ತಚರ ಅಧಿಕಾರಿ ಸಿ.ವೆಂಕಟೇಶ್, ಸಿಐಡಿ ಎಎಸ್ಸೈ ಶಮಂತ್ ಯಶ್ ಜಿ., ಕೆಎಸ್ಆರ್ಪಿ 4ನೆ ಪಡೆಯ ಎಚ್ಸಿ ಸಿ.ವಿ.ಗೋವಿಂದರಾಜು.
ಮಂಗಳೂರು ನಗರ ಸಂಚಾರ ಉಪ ವಿಭಾಗದ ಸಹಾಯ ಪೊಲೀಸ್ ಆಯುಕ್ತರ ಕಚೇರಿಯ ಸಿಎಚ್ಸಿ ಮಣಿಕಂಠ, ತುಮಕೂರಿನ ಜಿಲ್ಲಾ ಪೊಲೀಸ್ ಕಚೇರಿಯ ಸಿಎಚ್ಸಿ ಎಸ್.ಎನ್.ನರಸಿಂಹರಾಜು ಅವರ ಗಮನಾರ್ಹ ಸೇವೆ ಗುರುತಿಸಿ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದೆ.
ಗಣರಾಜ್ಯೋತ್ಸವದ ನಿಮಿತ್ತ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಹಾಗೂ ನಾಗರಿಕ ರಕ್ಷಣಾ ಇಲಾಖೆಗಳ 1,132 ರಾಷ್ಟ್ರಪತಿ ಪದಕ ವಿಜೇತ ಅಧಿಕಾರಿ ಹಾಗೂ ಸಿಬ್ಬಂದಿ ಹೆಸರನ್ನು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ. ರಾಜ್ಯದ 23 ಜನ ಪೊಲೀಸ್ ಅಧಿಕಾರಿಗಳು ಈ ಗೌರವಕ್ಕೆ ಭಾಜನರಾಗಿದ್ದಾರೆ.
ರಾಷ್ಟ್ರಪತಿ ವಿಶೇಷ ಸೇವಾ ಪದಕವನ್ನು ಇಲಾಖೆಯಲ್ಲಿನ ವಿಶೇಷವಾದ ಸೇವೆಯ ದಾಖಲೆಗಾಗಿ ನೀಡಲಾಗುತ್ತದೆ. ಮತ್ತು ಪ್ರಶಂಸನೀಯ ಪದಕವನ್ನು ಇಲಾಖೆಯಲ್ಲಿನ ಕರ್ತವ್ಯ ಹಾಗೂ ಅಮೂಲ್ಯ ಸೇವೆಗಾಗಿ ನೀಡಲಾಗುತ್ತದೆ. ವಿಜೇತರಿಗೆ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳು ನೀಡಲಿದ್ದಾರೆ.







