"ನೀವು ಜನ ಪ್ರತಿನಿಧಿಗಳಾ ಅಥವಾ ಇನ್ಯಾರದೋ ದಲ್ಲಾಳಿಗಳಾ": ಧರ್ಮಸ್ಥಳ ಪ್ರಕರಣ ಕುರಿತ ಆರ್. ಅಶೋಕ್ ಹೇಳಿಕೆಗೆ ಪ್ರಕಾಶ್ ರಾಜ್ ಆಕ್ರೋಶ

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಕುರಿತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್ ರಾಜ್, "ನೀವು ಜನ ಪ್ರತಿನಿಧಿಗಳಾ ಅಥವಾ ಇನ್ಯಾರದೋ ದಲ್ಲಾಳಿಗಳಾ" ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ಅಲ್ರೀ ಆಶೋಕ್ ಅವರೆ, ದಶಕಗಳಿಂದ ನಮ್ಮ ಹೆಣ್ಣುಮಕ್ಕಳ ಅತ್ಯಾಚಾರಗಳಾಗಿವೆ, ಅಮಾನವೀಯ ಹತ್ಯೆಗಳಾಗಿವೆ,ಜನರ ಆಕ್ರೋಶ ಭುಗಿಲೆದ್ದಿದೆ. ಕೊನೆಗೂ ಸರ್ಕಾರ ಸ್ಪಂದಿಸಿ SIT ರಚನೆಯಾಗಿದೆ. ತನಿಖೆ ನಡೆಯುತ್ತಿದೆ. ಮದ್ಯದಲ್ಲಿ ನಿಮ್ದೇನ್ರಿ. ನೀವು ಜನ ಪ್ರತಿನಿಧಿಗಳಾ.. ಅಥವಾ ಇನ್ಯಾರದೋ ದಲ್ಲಾಳಿಗಳಾ.. #justasking" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʼಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಹತ್ಯೆ ಆರೋಪ ಪ್ರಕರಣದ ದೂರುದಾರ ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರಕಾರ ಇದೆʼ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೋಮವಾರ ಆರೋಪಿಸಿದ್ದರು.
ಅಲ್ರೀ @RAshokaBJP ಅವರೆ, ದಶಕಗಳಿಂದ ನಮ್ಮ ಹೆಣ್ಣುಮಕ್ಕಳ ಅತ್ಯಾಚಾರಗಳಾಗಿವೆ,ಅಮಾನವೀಯ ಹತ್ಯೆಗಳಾಗಿವೆ,ಜನರ ಆಕ್ರೋಶ ಭುಗಿಲೆದ್ದಿದೆ.ಕೊನೆಗೂ ಸರ್ಕಾರ ಸ್ಪಂದಿಸಿ SIT ರಚನೆಯಾಗಿದೆ ತನಿಖೆ ನಡೆಯುತಿದೆ. ಮದ್ಯದಲ್ಲಿ ನಿಮ್ದೇನ್ರಿ .ನೀವು ಜನ ಪ್ರತಿನಿಧಿಗಳಾ.. ಅಥವಾ ಇನ್ಯಾರದೋ ದಲ್ಲಾಳಿಗಳಾ.. #justasking #DharmasthalaHorror pic.twitter.com/4065EH8ZwW
— Prakash Raj (@prakashraaj) July 29, 2025







