ಗೃಹ ಸಚಿವನಾಗಿ ಮೋಹನ್ ಭಾಗವತ್ ಅವರನ್ನು ಪ್ರಶ್ನೆ ಮಾಡಿದ್ದೇನೆ, ಅವರು ನನಗೆ ಉತ್ತರ ಕೊಡಲಿ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ದಲಿತರು ಯಾಕೆ ಆರೆಸ್ಸೆಸ್ ಬಗ್ಗೆ ಪ್ರಶ್ನೆ ಮಾಡಬಾರದು, ದಲಿತರು ಈ ಸಮಾಜದ, ಸಂವಿಧಾನದ ಭಾಗವಲ್ಲವೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದನ್ನು ಪ್ರಶ್ನೆ ಮಾಡಬೇಕು, ಪ್ರಶ್ನೆ ಮಾಡಬಾರದು ಎಂದು ಹೇಳುವುದಕ್ಕೆ ರಮೇಶ್ ಜಿಗಜಿಣಗಿ ಯಾರು? ನನಗೆ ವೈಯಕ್ತಿಕ ಅಧಿಕಾರವಿದೆ. ಕರ್ನಾಟಕದ ಗೃಹ ಸಚಿವರಾಗಿ ನಾನು ಏನು ಕೇಳುತ್ತಿದ್ದೇನೆ ಎಂಬುದು ನನಗೆ ಸ್ಪಷ್ಟವಾಗಿದೆ ಎಂದರು.
ಇಷ್ಟು ದೊಡ್ಡ ಸಂಘಟನೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದ ಮೇಲೆ ಅದರ ಕಾರ್ಯಚಟುವಿಕೆಗಳ ಬಗ್ಗೆ ಸರಕಾರಕ್ಕೆ ವಿವರ ನೀಡಬೇಕಾದದ್ದು ಅಗತ್ಯ ಎಂದರು.
ಗೃಹ ಸಚಿವನಾಗಿ ನಾನು ಮೋಹನ್ ಭಾಗವತ್ ಅವರನ್ನು ಪ್ರಶ್ನೆ ಮಾಡಿದ್ದೇನೆ, ಅವರು ನನಗೆ ಉತ್ತರ ಕೊಡಲಿ, ಬೇರೆಯವರು ಏಕೆ ಮಾತನಾಡಬೇಕು? ಸೋಷಿಯಲ್ ಮೀಡಿಯಾದಲ್ಲಿ ಹೇಳುವುದು ಏಕೆ, ಅಧಿಕೃತವಾಗಿ ಲೆಟರ್ ಹೆಡ್ ನಲ್ಲಿ ಉತ್ತರ ಕೊಡಲಿ ಎಂದು ಹೇಳಿದರು.
Next Story




