RSS ಅನ್ನು ಯಾರೇ ಪ್ರಶ್ನಿಸಿದರೂ, ಬಿಜೆಪಿ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತದೆ : ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ (Photo: PTI)
ಬೆಂಗಳೂರು : RSS ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ. RSS ಅನ್ನು ಯಾರೇ ಪ್ರಶ್ನಿಸಿದರೂ, ಬಿಜೆಪಿ ತನ್ನ ಗಾಂಭೀರ್ಯ ಕಳೆದುಕೊಳ್ಳುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ಯಾವ ಕೊಡುಗೆಯನ್ನೂ ನೀಡದ ಸಂಘಟನೆ ಇಂದು ದೇಶಕ್ಕೆ ದೇಶಭಕ್ತಿಯ ಪಾಠ ಹೇಳುವುದೇಕೆ ಎಂದು RSSನ ಪ್ರಶ್ನಿಸಿದರೆ - ಬಿಜೆಪಿ ಬುಸುಗುಡುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ-ಆರೆಸ್ಸೆಸ್ಗೆ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ನಾಗಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಲು 52 ವರ್ಷ ಏಕೆ ಬೇಕಾಯಿತು ಎಂದು RSSನ ಪ್ರಶ್ನಿಸಿದರೆ - ಬಿಜೆಪಿ ಬುಸುಗುಡುತ್ತದೆ. ಅವರು ನಿಜವಾಗಿ ಯಾರ ಸಂವಿಧಾನಕ್ಕೆ ನಿಷ್ಠೆ ತೋರುತ್ತಾರೆ — ಬಾಬಾಸಾಹೇಬರ ಸಂವಿಧಾನಕ್ಕೋ, ಅಥವಾ ತಾವೇ ಬರೆಯಬೇಕಿತ್ತು ಎಂದು ಬಯಸುವ ಸಂವಿಧಾನಕ್ಕೋ ಎಂದು RSSನ ಪ್ರಶ್ನಿಸಿದರೆ - ಬಿಜೆಪಿ ಬುಸುಗುಡುತ್ತದೆ. ತಮ್ಮನ್ನು ತಾವು ನೋಂದಾಯಿಸಿಕೊಳ್ಳಲು, ತೆರಿಗೆ ಪಾವತಿಸಲು ಏಕೆ ನಿರಾಕರಿಸುತ್ತಾರೆ ಎಂದು RSSನ ಪ್ರಶ್ನಿಸಿದರೆ - ಬಿಜೆಪಿ ಬುಸುಗುಡುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
RSS ಬೋಧಿಸುವುದನ್ನು RSSಗೇ ಪಾಲಿಸುವಂತೆ ಕೇಳಿಕೊಂಡರೆ - ಬಿಜೆಪಿ ಬುಸುಗುಡುತ್ತದೆ. ಬಿಜೆಪಿ ಎಂದಿಗೂ ಕೇವಲ RSSನ ಜೊತೆಗಾರನಲ್ಲ, ಬದಲಿಗೆ ಅದು ಸದಾ RSS ನ ಸಾಧನ ಆಗಿದೆ. ಬಿಜೆಪಿಯ ಪ್ರತಿ ಬುಸುಗುಡುವಿಕೆ, ಅದರ ಬಾಲ ಯಾರ ಕೈಯಲ್ಲಿದೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.
Rattle the RSS & BJP hisses.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 25, 2026
Everytime anyone questions the RSS, BJP loses its composure.
Ask why an organisation that contributed nothing to the freedom struggle now lectures the nation on patriotism and the BJP hisses back.
Ask why it took 52 years for the Tricolour to be… pic.twitter.com/oTgmeY5s7L






