ದೇಶ ಸುಭದ್ರವಾಗಲು ಆರೆಸ್ಸೆಸ್ ಕಾರಣ: ಛಲವಾದಿ ನಾರಾಯಣಸ್ವಾಮಿ
ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು

ಬೆಂಗಳೂರು: ಇವತ್ತೇನಾದರೂ ಈ ದೇಶ ಸುಭದ್ರವಾಗಿದೆ ಎಂದರೆ ಅದಕ್ಕೆ ಆರೆಸ್ಸೆಸ್ ಕಾರಣವೇ ಹೊರತು ಕಾಂಗ್ರೆಸ್ ಅಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ರವಿವಾರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ʼಆರೆಸ್ಸೆಸ್ ನ 10 ಒಳ್ಳೆ ಕೆಲಸ ಹೇಳಿʼ ಎಂಬ ಹೇಳಿಕೆಗೆ ತಿರಗೇಟು ನೀಡಿದರು.
ನನಗೆ ನಿನ್ನ ಇತಿಹಾಸವೂ ಗೊತ್ತು, ನಿನ್ನಪ್ಪನ ಇತಿ ಹಾಸವೂ ಗೊತ್ತು. ಪದೇ ಪದೆ ನನ್ನನ್ನು ಕೆಣಕಬೇಡಿ ಎಂದರು.
ಪ್ರಿಯಾಂಕ್ ಗೆ ಅಧಿಕಾರದ ಮದ ನೆತ್ತಿಗೇರಿದೆ. ಅದೊಂದು ಬಾಲಂಗೋಚಿ. ನನ್ನ ಬಗ್ಗೆ ಮಾತನಾಡುವುದಲ್ಲದೆ, ಆರೆಸ್ಸೆಸ್ ಬಗ್ಗೆಯೂ ಮಾತನಾಡುತ್ತದೆ ಎಂದಿದ್ದಾರೆ.
Next Story





