Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಸಜ್ಜೆಪಾಳ್ಯ 44 ಎಕರೆ ಆಸ್ತಿ ವ್ಯಾಜ್ಯ...

ಸಜ್ಜೆಪಾಳ್ಯ 44 ಎಕರೆ ಆಸ್ತಿ ವ್ಯಾಜ್ಯ ವಿವಾದ : ಒಕ್ಕಲಿಗರ ಸಂಘಕ್ಕೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆ

ವಾರ್ತಾಭಾರತಿವಾರ್ತಾಭಾರತಿ2 Nov 2026 7:17 PM IST
share
ಸಜ್ಜೆಪಾಳ್ಯ 44 ಎಕರೆ ಆಸ್ತಿ ವ್ಯಾಜ್ಯ ವಿವಾದ : ಒಕ್ಕಲಿಗರ ಸಂಘಕ್ಕೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆ

ಬೆಂಗಳೂರು: ಯಶವಂತಪುರ ಹೋಬಳಿಯ ಶ್ರೀಗಂಧ ಕಾವಲು ವ್ಯಾಪ್ತಿಯ ಸಜ್ಜೆಪಾಳ್ಯದಲ್ಲಿರುವ ವಿವಾದಿತ 44 ಎಕರೆ ಜಮೀನಿನ ಹಕ್ಕಿನ ವ್ಯಾಜ್ಯದಲ್ಲಿ ಒಕ್ಕಲಿಗರ ಸಂಘಕ್ಕೆ ಭಾರಿ ಹಿನ್ನಡೆಯಾಗಿದ್ದು, ಜಮೀನಿನ ಮೂಲ ವಾರಸುದಾರರ ಪರವಾಗಿ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.

ಲೇಔಟ್ ನಕ್ಷೆ ಮಂಜೂರು ಮಾಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೊಂಡಿರುವ ನಿರ್ಣಯ ಮತ್ತು ಕಂದಾಯ ದಾಖಲೆಗಳ ನಮೂದು ರದ್ದು ಕೋರಿ ಒಕ್ಕಲಿಗರ ಸಂಘದ ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್‌ನ ಅಧಿಕೃತ ಕಾರ್ಯದರ್ಶಿ ಎಚ್.ಎನ್. ಅಶೋಕ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣವೇನು? :

ಸಜ್ಜೆಪಾಳ್ಯದ ಸರ್ವೇ ನಂಬರ್ 15ರಲ್ಲಿದ್ದ 44 ಎಕರೆ ಜಮೀನನ್ನು ದಿವಂಗತ ರಂಗಮ್ಮ ಅವರು ಬಿ.ಎಂ. ಪುಟ್ಟಸ್ವಾಮಿ ಎಂಬುವರಿಗೆ ಉಯಿಲು ಬರೆದುಕೊಟ್ಟಿದ್ದರು. 1978ರಲ್ಲಿ ಭೂ ಸುಧಾರಣೆ ಕಾಯ್ದೆಯ ಗರಿಷ್ಠ ಭೂ ಮಿತಿಯಿಂದ ವಿನಾಯಿತಿ ಪಡೆಯಲು ಪುಟ್ಟಸ್ವಾಮಿ ಅವರು ಒಕ್ಕಲಿಗರ ಸಂಘದ ಜತೆ ಟ್ರಸ್ಟ್ ಡೀಡ್ ಮಾಡಿಕೊಂಡಿದ್ದರು. ಆದರೆ, ಈ ಟ್ರಸ್ಟ್ ಡೀಡ್ ಜಾರಿಗೆ ಬಂದಿರಲಿಲ್ಲ. ಪುಟ್ಟಸ್ವಾಮಿ ಅವರ ನಿಧನದ ಬಳಿಕ ಅವರ ಪುತ್ರ ಬಿ.ಪಿ. ಮಹೇಂದ್ರ ಆಸ್ತಿಯ ಮೇಲಿನ ಹಕ್ಕು ಸಾಧಿಸಿ ಕಾನೂನು ಹೋರಾಟ ಮುಂದುವರಿಸಿದ್ದರು.

ಹೈಕೋರ್ಟ್ ಆದೇಶವೇನು? :

ಒಕ್ಕಲಿಗರ ಸಂಘ ಅವಲಂಬಿಸಿದ್ದ 1978ರ ಟ್ರಸ್ಟ್ ಡೀಡ್ ಜಾರಿಗೆ ಬಂದಿರಲಿಲ್ಲ ಮತ್ತು ಅದರ ಆಧಾರದಡಿ ಸಂಘಕ್ಕೆ ಆಸ್ತಿಯ ಮೇಲೆ ಯಾವುದೇ ಹಕ್ಕು ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವಿವಾದಿತ ಆಸ್ತಿಯ ಮೇಲೆ ಸಂಘಕ್ಕಾಗಲೀ ಅಥವಾ ಟ್ರಸ್ಟ್‌ಗಾಗಲೀ ಯಾವುದೇ ಹಕ್ಕು, ಸ್ವಾಮ್ಯ ಅಥವಾ ಆಸಕ್ತಿ ಉಳಿಯುವುದಿಲ್ಲ. ದಿವಂಗತ ರಂಗಮ್ಮ ಹಾಗೂ ಬಿ.ಎಂ.ಪುಟ್ಟಸ್ವಾಮಿ ಅವರ ವಿಲ್‌ಗಳ ಆಧಾರದಡಿ ಬಿ.ಪಿ.ಮಹೇಂದ್ರ ಅವರಿಗೆ ಮಾತ್ರವೇ ಆಸ್ತಿ ನಿರ್ವಹಿಸುವ, ಬಳಸಿಕೊಳ್ಳುವ ಹಾಗೂ ಮಾರಾಟ ಮಾಡುವ ಹಕ್ಕು ಇರುತ್ತದೆ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅನುಮೋದಿಸಿದ್ದ ಬಡಾವಣೆಯ ವಿನ್ಯಾಸವನ್ನು ಎತ್ತಿಹಿಡಿದಿರುವ ನ್ಯಾಯಪೀಠ, ಸಂಘವು ಸಹಾಯಕ ಆಯುಕ್ತರ ಮುಂದೆ ಆರಂಭಿಸಿದ್ದ ಕಂದಾಯ ಪ್ರಕ್ರಿಯೆಗಳನ್ನೂ ರದ್ದುಪಡಿಸಿದೆ.

ನಾಲ್ಕು ದಶಕಗಳ ವ್ಯಾಜ್ಯ :

ಕಳೆದ ನಾಲ್ಕು ದಶಗಳಿಗೂ ಹೆಚ್ಚಿನ ಕಾಲದಿಂದ ನಡೆಯುತ್ತಿರುವ ಈ ಆಸ್ತಿ ವಿವಾದದಲ್ಲಿ ಒಕ್ಕಲಿಗರ ಸಂಘ ಮತ್ತು ದಾವೆದಾರರ ನಡುವೆ ನಡೆದಿದ್ದ ರಾಜಿ ಪ್ರಕ್ರಿಯೆಯಡಿ 6 ಎಕರೆ 20 ಗುಂಟೆ ಜಮೀನಿನ ಮೇಲೆ ಸಂಘ ಹಕ್ಕು ಪಡೆಯುವ ಪ್ರಯತ್ನ ನಡೆಸಿತ್ತು. ಆದರೆ, ಅಗತ್ಯ ಕೋರ್ಟ್‌ ಶುಲ್ಕ ಪಾವತಿಸದ ಕಾರಣದಿಂದ ಅಂತಿಮವಾಗಿ ವಿಫಲವಾಗಿತ್ತು.

Tags

High CourtVokkaligara SanghaSajje Palya
share
ವಾರ್ತಾಭಾರತಿ
ವಾರ್ತಾಭಾರತಿ
Next Story
X